ಭಾನುವಾರ, ಆಗಸ್ಟ್ 25, 2019
28 °C

‘ಟಕ್ಕರ್’ಗೆ ಹಾಡಿನ ಸಂಭ್ರಮ

Published:
Updated:

ರಘು ಶಾಸ್ತ್ರಿ ನಿರ್ದೇಶನದ ಟಕ್ಕರ್ ಚಿತ್ರದ ಹಾಡುಗಳು ಸಿನಿಮಾ ಪ್ರಿಯರ ಕಿವಿಯನ್ನು ಮುತ್ತಿಕ್ಕಲು ಸಿದ್ಧವಾಗಿವೆ. ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣದ ಈ ಚಿತ್ರ ತಮಿಳಿಗೆ ಕೂಡ ಡಬ್ ಆಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ‌್ ಅವರ ಅಳಿಯ ಮನೋಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ರಂಜನಿ ರಾಘವನ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳು ಇವೆ. ಎರಡು ಹಾಡುಗಳನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.

ಥ್ರಿಲ್ಲರ್ ಮತ್ತು ಸಾಹಸ ಈ ಚಿತ್ರದಲ್ಲಿ ಕಂಡುಬರುವ ಪ್ರಧಾನ ಅಂಶಗಳು ಎಂದು ಚಿತ್ರತಂಡ ಹೇಳಿದೆ. ವಿಜಯಪ್ರಕಾಶ್ ಮತ್ತು ಅನುರಾಧಾ ಭಟ್, ಶಶಾಂಕ್ ಶೇಷಗಿರಿ ಹಾಗೂ ಸಂಜಿತ್ ಹೆಗ್ಡೆ ಹಾಡುಗಳಿಗೆ ದನಿಯಾಗಿದ್ದಾರೆ. ಅಂದಹಾಗೆ, ಹಾಡುಗಳ ಬಿಡುಗಡೆ ಆಗಸ್ಟ್ ತಿಂಗಳಲ್ಲಿ ಆಗುವ ನಿರೀಕ್ಷೆ ಇದೆ.

‘ನಮ್ಮ ಮನೆಯ ಹೆಣ್ಣುಮಕ್ಕಳ ಮೇಲೆ ಕಣ್ಣಿಡಲು ಆಗಂತುಕರು ಎಂಟ್ರಿ ಕೊಡುವುದಿಲ್ಲ. ಕೈಯಲ್ಲಿರುವ ಮೊಬೈಲು ಮತ್ತು ಲ್ಯಾಪ್‍ಟಾಪ್‍ಗಳೇ ಅವರ ಮಾನ, ಪ್ರಾಣಗಳನ್ನು ಬಲಿ ತೆಗೆದುಕೊಳ್ಳುತ್ತಿದೆ’ ಎನ್ನುವುದು ಚಿತ್ರದ ಕಥೆಯ ಎಳೆ.

ಕದ್ರಿ ಮಣಿಕಾಂತ್ ಸಂಗೀತ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರಕಥೆಯನ್ನು ರಘು ಶಾಸ್ತ್ರಿ ಅವರೇ ಬರೆದಿದ್ದಾರೆ. ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲ ತಾರಾಗಣದಲ್ಲಿ ಇದ್ದಾರೆ.

Post Comments (+)