ತಮನ್ನಾ ಮದ್ವೆ ಯಾವಾಗ?

ಬುಧವಾರ, ಜೂನ್ 26, 2019
29 °C

ತಮನ್ನಾ ಮದ್ವೆ ಯಾವಾಗ?

Published:
Updated:
Prajavani

‘ಮಿಲ್ಕ್ ಬ್ಯೂಟಿ’ ತಮನ್ನಾ ಭಾಟಿಯಾ ಮದುವೆ ಬಗ್ಗೆ ಅವಳ ಅಭಿಮಾನಿಗಳು ಪದೇಪದೇ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಆದರೆ, ಇದುವರೆಗೂ ಮದುವೆ ವಿಚಾರ ಸದ್ಯಕ್ಕಿಲ್ಲ ಅಂತ ಹೇಳುತ್ತಲೇ ಬಂದಿದ್ದಾರೆ. ಆದರೆ, ಈಚೆಗೆ ತಮ್ಮ ಮದುವೆ ವಿಚಾರ ಕುರಿತು ಅಭಿಮಾನಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

‘ನೋಡಿ ನಾನಿನ್ನೂ ವೃತ್ತಿಯಲ್ಲಿ ಇನ್ನೂ ಸಾಧನೆ ಮಾಡಬೇಕು. ಅಲ್ಲಿಯ ತನಕ ಮದುವೆಯ ಬಗ್ಗೆ ಯೋಚಿಸಲೂ ನನಗೆ ಪುರುಸೊತ್ತಿಲ್ಲ’ ಎಂದು ತಮನ್ನಾ ಕಡ್ಡಿಮುರಿದಂತೆ ಹೇಳಿದ್ದಾರೆ. 

ಜೀವನದಲ್ಲಿ ನಾನು ಮಾಡಬೇಕಿರುವ ಕೆಲಸಗಳು ಇನ್ನೂ ಸಾಕಷ್ಟಿವೆ. ಮದುವೆಗೂ ಮುನ್ನ ಎಷ್ಟೊಂದು  ಕೆಲಸಗಳನ್ನು ಮಾಡಬೇಕಿದೆ. ಈಜು ಕಲಿಯುವುದು, ವಾಹನ ಚಲಾಯಿಸುವುದು ಇವೆಲ್ಲವನ್ನೂ ಮದುವೆಗೂ ಮುನ್ನವೇ ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ. ತಮನ್ನಾ ಅಭಿನಯದ ‘ದೇವಿ 2’ ಸಿನಿಮಾ ಈಚೆಗಷ್ಟೇ ಬಿಡುಗಡೆಯಾಗಿದೆ. ಹಿಂದಿಯಲ್ಲಿ ‘ಖಾಮೋಷಿ’, ತೆಲುಗಿನಲ್ಲಿ ‘ಮಹಾಲಕ್ಷ್ಮೀ’ (ಕ್ವೀನ್ ರಿಮೇಕ್‌) ಹಾಗೂ ‘ಸೈ ರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ತಮನ್ನಾ ನಟಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !