‘ಅಭಿನೇತ್ರಿ 2’ರಲ್ಲಿ ಮತ್ತೇರಿಸುವ ತಮನ್ನಾ

ಗುರುವಾರ , ಜೂನ್ 20, 2019
24 °C
Tamannaah bhatia

‘ಅಭಿನೇತ್ರಿ 2’ರಲ್ಲಿ ಮತ್ತೇರಿಸುವ ತಮನ್ನಾ

Published:
Updated:
Prajavani

ತಮಿಳಿನಲ್ಲಿ ಪ್ರಭುದೇವಗೆ ಜೋಡಿಯಾಗಿ ನಟಿಸಿದ್ದ ‘ದೇವಿ’ ಹಿಟ್ ಆದ ಬೆನ್ನಲ್ಲೇ ‘ದೇವಿ 2’ ಕೂಡಾ ತೆರೆ ಕಾಣಲು ಸಜ್ಜಾಗಿದೆ. ‘ದೇವಿ 2’ ರ ತೆಲುಗು ರಿಮೇಕ್ ಆಗಿರುವ ‘ಅಭಿನೇತ್ರಿ 2’ ಮೇ 31ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಹಾಡೊಂದರಲ್ಲಿ ಕ‍ಪ್ಪು ಉಡುಗೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ತಮನ್ನಾ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ

ಐದು ವರ್ಷಗಳಲ್ಲಿ ನಾಲ್ಕು ಹಿಟ್ ಚಿತ್ರಗಳನ್ನು ಕೊಟ್ಟಿರುವ ನಟಿ ತಮನ್ನಾ ಭಾಟಿಯಾ ‘ಅಭಿನೇತ್ರಿ 2’ ಸಿನಿಮಾದಲ್ಲಿ ಮತ್ತೊಮ್ಮೆ ಸಿನಿ ರಸಿಕರನ್ನು ರಂಜಿಸಲಿದ್ದಾರೆ.

‘ಬಾಹುಬಲಿ 2’ ಚಿತ್ರದ ಹಾಡೊಂದರಲ್ಲಿ ಮಾದಕವಾಗಿ ಕಾಣಿಸಿಕೊಂಡಿದ್ದ ತಮನ್ನಾ ನಂತರ ಕನ್ನಡದ ‘ಕೆಜಿಎಫ್’ ಸೇರಿದಂತೆ ಒಂದೆರಡು ಸಿನಿಮಾಗಳ ಹಾಡುಗಳಲ್ಲಿ ಕಾಣಿಸಿ ಕೊಂಡರಾದರೂ ಅಭಿಮಾನಿಗಳ ಮನವನ್ನು ಅಷ್ಟಾಗಿ ಗೆದ್ದಿರಲಿಲ್ಲ. 

ತಮಿಳಿನಲ್ಲಿ ಪ್ರಭುದೇವಗೆ ಜೋಡಿಯಾಗಿ ನಟಿಸಿದ್ದ ‘ದೇವಿ’ ಹಿಟ್ ಆದ ಬೆನ್ನಲ್ಲೇ ‘ದೇವಿ 2’ ಕೂಡಾ ತೆರೆ ಕಾಣಲು ಸಜ್ಜಾಗಿದೆ. ‘ದೇವಿ 2’ ರ ತೆಲುಗು ರಿಮೇಕ್ ಆಗಿರುವ ‘ಅಭಿನೇತ್ರಿ 2’ ಮೇ 31ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಹಾಡೊಂದರಲ್ಲಿ ಕ‍ಪ್ಪು ಉಡುಗೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ತಮನ್ನಾ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ.

ಈ ಹಾಡು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಮನ್ನಾ ಅಭಿಮಾನಿಗಳು ಖುಷಿಯಾಗಿದ್ದಾರಂತೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !