ಹಾರರ್ ಚಿತ್ರದಲ್ಲಿ ತಮನ್ನಾ

ಬುಧವಾರ, ಜೂನ್ 19, 2019
23 °C

ಹಾರರ್ ಚಿತ್ರದಲ್ಲಿ ತಮನ್ನಾ

Published:
Updated:
Prajavani

‘ಮಿಲ್ಕ್ ಬ್ಯೂಟಿ’ ತಮನ್ನಾ ಭಾಟಿಯಾ, ಪ್ರಭುದೇವ ಜತೆಗಿನ ‘ದೇವಿ 2’ ಮತ್ತು ‘ಖಾಮೋಷಿ’ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಇನ್ನೂ ಹೆಸರಿಡದ ಹಾರರ್, ಕಾಮಿಡಿ ಸಿನಿಮಾದಲ್ಲಿ ತಮನ್ನಾ ಅಭಿನಯಿಸುತ್ತಿರುವುದು ಅವಳ ಅಭಿಮಾನಿಗಳಿಗೆ ಖುಷಿ ತಂದಿದೆ.

ರೋಹಿಣ್‌ ವೆಂಕಟೇಶನ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಶೀಘ್ರದಲ್ಲೇ ತಮನ್ನಾ ಸೆಟ್‌ಗೆ ಹಾಜರಾಗಲಿದ್ದಾರೆ. ನಾಯಕಿ ಪ್ರಧಾನವಾಗಿರುವ ಈ ಚಿತ್ರದಲ್ಲಿ ತಮನ್ನಾ ಭಿನ್ನ ಬಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವುದು ನಿರ್ದೇಶಕರ ಅಭಿಪ್ರಾಯ. ತಮನ್ನಾಗೆ ಜತೆಯಾಗಿ ಯೋಗಿ ಬಾಬುಬ, ಮುನಿಕಾಂತ್, ಮನ್ಜೂರ್ ಅಲಿ ಖಾನ್ ಇದ್ದಾರೆ. ಬ್ರೇಕ್ ಇಲ್ಲದೇ ಸತತ 42 ದಿನಗಳ ಕಾಲ ಚಿತ್ರೀಕರಣ ಮಾಡಬೇಕೆಂಬುದು ಚಿತ್ರತಂಡದ ಆಸೆ. ಚೆನ್ನೈನಲ್ಲಿ ಹತ್ತು ದಿನಗಳ ಶೂಟಿಂಗ್ ಮುಗಿಸಿ, ನಂತರದ 32 ದಿನಗಳ ಚಿತ್ರೀಕರಣವನ್ನು ಕರೈಕುಡಿಯಲ್ಲಿ ಶೂಟಿಂಗ್ ಮಾಡಲಿದೆಯಂತೆ. 

‘ದೇವಿ 2’, ‘ಖಾಮೋಷಿ’ ನಂತರ ಹಿಂದಿಯ ‘ಕ್ವೀನ್’ ತಮಿಳು ರಿಮೇಕ್‌ನಲ್ಲೂ ತಮನ್ನಾ ಕಾಣಿಸಿ ಕೊಳ್ಳಲಿದ್ದಾರೆ. ಚಿರಂಜೀವಿಯ ‘ಸೈ ರಾ ನರಸಿಂಹ ರೆಡ್ಡಿ’ಯಲ್ಲೂ ತಮನ್ನಾಳದ್ದು ಪ್ರಧಾನ ಪಾತ್ರವಂತೆ. ಈ ವರ್ಷವಿಡೀ ಬ್ಯುಸಿಯಾಗಿರುವ ತಮನ್ನಾ ತನ್ನ ಅಭಿಮಾನಿಗಳಿಗೆ ಸಾಲುಸಾಲು ಚಿತ್ರಗಳ ಮೂಲಕ ಮನರಂಜನೆಯ ರಸದೌತಣ ಬಡಿಸಲು ಸಿದ್ಧರಾಗಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !