ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ತಂಗಲಾನ್‌’ನಲ್ಲಿ ಕೆಜಿಎಫ್‌ ಚಿನ್ನದ ಹುಡುಕಾಟ: ಆ.15ರಂದು ತೆರೆಗೆ

Published : 7 ಆಗಸ್ಟ್ 2024, 12:50 IST
Last Updated : 7 ಆಗಸ್ಟ್ 2024, 12:50 IST
ಫಾಲೋ ಮಾಡಿ
Comments

ಪ.ರಂಜಿತ್‌ ನಿರ್ದೇಶನದಲ್ಲಿ ಚಿಯಾನ್‌ ವಿಕ್ರಂ ನಟಿಸಿರುವ ‘ತಂಗಲಾನ್‌’ ಚಿತ್ರ ಆ.15ರಂದು ತೆರೆ ಕಾಣುತ್ತಿದೆ. ಕೆಜಿಎಫ್‌ನ ಚಿನ್ನದ ಗಣಿ ಸುತ್ತಲಿನ ಬುಡಕಟ್ಟು ಸಮುದಾಯದವರು ಚಿನ್ನವನ್ನು ಹುಡುಕುವ ಕಥೆಯನ್ನು ಚಿತ್ರ ಹೊಂದಿದೆ.

‘ಕೆಜಿಎಫ್‌’ ಬರುವುದಕ್ಕಿಂತ ಮುಂಚೆ ಬರೆದ ಕಥೆ. ಕೆಜಿಎಫ್‌ ಚಿತ್ರ ಪ್ರಾರಂಭವಾದಾಗ ನನ್ನ ಕೆಲಸ ನಿಲ್ಲಿಸಿದೆ. ಆದರೆ ಕೆಜಿಎಫ್‌ನಲ್ಲಿ ಇರುವುದು ಬೇರೆಯದೇ ಕಥೆ ಎಂದು ಚಿತ್ರದ ನೋಡಿದ ಮೇಲೆ ತಿಳಿಯಿತು. ಹಾಗಾಗಿ ಚಿತ್ರವನ್ನು ಮತ್ತೆ ಕೈಗೆತ್ತಿಕೊಂಡಿದೆ. ಕೆಜಿಎಫ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯವದರು ನಡೆದ ಚಿನ್ನದ ಹುಡುಕಾಟ, ಬ್ರಿಟಿಷರ ವಿರುದ್ಧದ ಹೋರಾಟ, ವಸಹಾತುಶಾಹಿತ್ವ ಮೊದಲಾದ ಅಂಶಗಳು ಚಿತ್ರದಲ್ಲಿದೆ’ ಎಂದರು ನಿರ್ದೇಶಕ ಪ.ರಂಜಿತ್‌.

ಮೂಲ ತಮಿಳಿನ ಚಿತ್ರ ಹಲವು ಭಾಷೆಗಳಿಗೆ ಡಬ್‌ ಆಗಿ ಬಿಡುಗಡೆಗೊಳ್ಳುತ್ತಿದೆ. ‘ನನ್ನ ವೃತ್ತಿ ಬದುಕಿನಲ್ಲಿ ಭಿನ್ನವಾದ ಪಾತ್ರಗಳನ್ನು ಆಯ್ದುಕೊಂಡಿದ್ದೇನೆ. ಆದರೆ ಇದು ಎಲ್ಲದಕ್ಕಿಂತ ಭಿನ್ನ. ಚಿತ್ರೀಕರಣ ಬಹಳ ಕಷ್ಟವಾಗಿತ್ತು. ನೈಜ ಲೋಕವನ್ನು ಸೃಷ್ಟಿಸುವ ನಿರ್ದೇಶಕ ಪ.ರಂಜಿತ್‌ ಜೊತೆ ಕೆಲಸ ಮಾಡುವುದು ಸುಲಭವಲ್ಲ. ಈ ಚಿತ್ರದ ಚಿತ್ರೀಕರಣದ ವೇಳೆ ಹಲವರಿಗೆ ಸಾಕಷ್ಟು ಗಾಯಗಳಾಗಿವೆ. ಚಿತ್ರ ಅವೆಲ್ಲವನ್ನು ಮರೆಸುವ ರೀತಿಯಲ್ಲಿ ಬಂದಿದೆ. ಎಲ್ಲ ಭಾಷೆಗಳಲ್ಲಿ ನಟಿಸಿರುವೆ. ಅದೇ ರೀತಿ ಕನ್ನಡದಲ್ಲಿಯೂ ಚಿತ್ರ ಮಾಡಬೇಕೆಂಬ ಆಸೆಯಿದೆ. ‘ಕೆಜಿಎಫ್‌’, ‘ಕಾಂತಾರ’ ಚಿತ್ರಗಳು ಜಗತ್ತೇ ನಮ್ಮ ಕಡೆಗೆ ತಿರುಗಿ ನೋಡುವಂತೆ ಮಾಡಿವೆ’ ಎಂದರು ಚಿಯಾನ್‌ ವಿಕ್ರಂ.

ಜಿ.ವಿ.ಪ್ರಕಾಶ್‌ ಸಂಗೀತವಿರುವ ಚಿತ್ರದಲ್ಲಿ ಪಾರ್ವತಿ, ಮಾಳವಿಕ ಮೋಹನನ್‌ ನಾಯಕಿಯರು. ಎ.ಕಿಶೋರ್‌ ಕುಮಾರ್‌ ಛಾಯಾಚಿತ್ರಗ್ರಹಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT