ತೆರೆ ಮೇಲೆ ಮಿಂಚಲು ಸಜ್ಜಾಗಿದೆ ಟ್ಯಾಕ್ಸಿವಾಲಾ

7

ತೆರೆ ಮೇಲೆ ಮಿಂಚಲು ಸಜ್ಜಾಗಿದೆ ಟ್ಯಾಕ್ಸಿವಾಲಾ

Published:
Updated:

ಅರ್ಜುನ್‌ರೆಡ್ಡಿಯಾಗಿ ತರುಣಿಯರ ಹೃದಯಗೆದ್ದ ವಿಜಯ್ ದೇವರಕೊಂಡ ಅವರನ್ನು ದೆವ್ವವೊಂದು ಇನ್ನಿಲ್ಲದಂತೆ ಕಾಡುತ್ತಿದೆ. ಹೌದು, ಅವರ ಅಭಿನಯದ ‘ಟ್ಯಾಕ್ಸಿವಾಲಾ’ ಸಿನಿಮಾವು ಇದೇ 16ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದಲ್ಲಿ ದೆವ್ವವೊಂದು ಕಾರಿನ ರೂಪದಲ್ಲಿ ವಿಜಯ್‌ಗೆ ಕಾಟ ನೀಡಿದೆಯಂತೆ.

ಈಚೆಗೆ ಸಿನಿಮಾದ ಥಿಯೇಟರಿಕಲ್ ಟ್ರೇಲರ್‌ ಬಿಡುಗಡೆಯಾಗಿದ್ದು, ಅದು ನೋಡುಗರ ಗಮನ ಸೆಳೆದಿದೆ. ಎರಡು ನಿಮಿಷ ಹತ್ತು ಸೆಕೆಂಡ್‌ವುಳ್ಳ ಈ ಟ್ರೇಲರ್‌ ನೋಡಲು ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ಬಿಡುಗಡೆಯಾದ ಮೊದಲ ದಿನವೇ ಲಕ್ಷಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಪಾತ್ರ ಟ್ಯಾಕ್ಸಿವಾಲಾ. ಅವರಿಗೆ ಜೋಡಿಯಾಗಿ ಪ್ರಿಯಾಂಕ ಜವಾಲ್ಕರ್ ಹಾಗೂ ಮಾಳವಿಕಾ ನಾಯರ್ ನಟಿಸಿದ್ದಾರೆ.

ಅನೇಕ ವರ್ಷಗಳಿಂದ ಮೂಲೆಗುಂಪಾಗಿದ್ದ ಟ್ಯಾಕ್ಸಿಯೊಂದನ್ನು ಸ್ವಚ್ಛಗೊಳಿಸಿ, ಅದನ್ನೇ ಜೀವನೋಪಾಯಕ್ಕೆ ವಿಜಯ್ ಬಳಸಿಕೊಳ್ಳುತ್ತಾರೆ. ಅದರಲ್ಲಿ ದೆವ್ಯ ಹೇಗೆ ಸೇರಿಕೊಳ್ಳುತ್ತದೆ ಹಾಗೂ ಅದರಿಂದ ವಿಜಯ್ ಏನೆಲ್ಲ ತೊಂದರೆ ಅನುಭವಿಸುತ್ತಾರೆ ಎಂಬುದೇ ಸಿನಿಮಾದ ಕಥೆ. ರಾಹುಲ್ ಸಂಕ್ತಿತ್ಯಾನ್ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದು, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಟ್ಯಾಕ್ಸಿವಾಲಾ ಕೈಹಿಡಿಯಲಿದೆಯೇ?

ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ವಿಜಯ್‌ಗೆ ಅದರಷ್ಟೇ ಹೆಸರು ತಂದುಕೊಟ್ಟ ಸಿನಿಮಾ ‘ಗೀತಾ ಗೋವಿಂದಂ’. ಈ ಸಿನಿಮಾದಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಅವರಿಬ್ಬರ ನಡುವಿನ ಲಿಪ್‌ಲಾಕ್ ಸೀನ್‌ನಿಂದಾಗಿ ಭಾರಿ ಚರ್ಚೆಯೇ ಎರ್ಪಟ್ಟಿತ್ತು.

ಗೀತಾ ಗೋವಿಂದಂ ಬಳಿಕ ತೆರೆಗೆ ಬಂದ ನೋಟಾ ಸಿನಿಮಾವು ಬಂದಷ್ಟೇ ವೇಗವಾಗಿ ಚಿತ್ರಮಂದಿರಗಳಿಂದ ಮರೆಯಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಆ ಸಿನಿಮಾ ಹೆಸರು ತಂದುಕೊಡಲಿಲ್ಲ. ಹೀಗಾಗಿಯೇ, ವಿಜಯ್‌ ಟ್ಯಾಕ್ಸಿವಾಲಾ ಸಿನಿಮಾದ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !