ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಯಿಗೆ ತಕ್ಕ ಮಗ’ ಸೆಲ್ಫಿ ಸ್ಪರ್ಧೆ

Last Updated 29 ಅಕ್ಟೋಬರ್ 2018, 10:54 IST
ಅಕ್ಷರ ಗಾತ್ರ

ನಟ ಅಜಯ್ ರಾವ್ ಅಭಿನಯದ ‘ತಾಯಿಗೆ ತಕ್ಕ ಮಗ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಈಗಾಗಲೇ ಬಿಡುಗಡೆಗೊಂಡಿರುವ ಅದರ ಹಾಡುಗಳು ಜನರ ಬಾಯಲ್ಲಿ ಪದೇ ಪದೇ ಗುನುಗುತ್ತಿವೆ.

ತಾಯಿ ಮಗನ ಸೆಂಟಿಮೆಂಟ್ ಕಥಾಹಂದರವುಳ್ಳ ಈ ಸಿನಿಮಾದ ಪ್ರಚಾರ ಕಾರ್ಯ ಈಗಾಗಲೇ ಶುರು ಮಾಡಿರುವ ಚಿತ್ರತಂಡ, ‘ತಾಯಿಗೆ ತಕ್ಕ ಮಗ ಸೆಲ್ಫಿ’ ಸ್ಪರ್ಧೆ ಆಯೋಜಿಸಿದೆ. ತಮ್ಮ ತಾಯಿಯೊಂದಿಗೆ ಸೆಲ್ಪಿ ತೆಗೆದುಕೊಂಡ ಫೋಟೊವನ್ನು ಸಾರ್ವಜನಿಕರು ವಾಟ್ಸ್‌ಆ್ಯಪ್‌ ಮೂಲಕ ಚಿತ್ರತಂಡಕ್ಕೆ ಕಳುಹಿಸಿಕೊಡಬೇಕು.

ಅಂದಹಾಗೇ ಈ ಸೆಲ್ಫಿ ಸ್ಪರ್ಧೆಯಲ್ಲಿ ನಾಲ್ಕು ಬಹುಮಾನಗಳಿದ್ದು, ಮೊದಲ ಬಹುಮಾನ ₹ 50 ಸಾವಿರ, ಎರಡನೆಯ ಬಹುಮಾನ ₹ 25 ಸಾವಿರ, ಮೂರನೇ ಬಹುಮಾನ ₹ 15 ಸಾವಿರ ಹಾಗೂ ನಾಲ್ಕನೆಯ ಬಹುಮಾನ ₹ 10 ಸಾವಿರ. ನವೆಂಬರ್ 2ರ ಒಳಗೆ ಸೆಲ್ಫಿ ಫೋಟೊಗಳನ್ನು ಸಾರ್ವಜನಿಕರು ಕಳುಹಿಸಿಕೊಡಬೇಕು.

ಸಿನಿಮಾದ ನಿರ್ದೇಶಕ ಶಶಾಂಕ್, ‘ಸೆಲ್ಫಿ ಕಾಂಟೆಸ್ಟ್! ಅಮ್ಮನಿಗೆ ಕೊಡಿ ₹ 50 ಸಾವಿರ ಗಿಫ್ಟ್. ನಿಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದು7338259619ಗೆ ವಾಟ್ಸ್‌ಆ್ಯಪ್ ಮಾಡಿ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಅಜಯ್ ರಾವ್‌ಗೆ ಜೋಡಿಯಾಗಿ ಅಶಿಕಾ ರಂಗನಾಥ್ ನಟಿಸಿದ್ದು, ಅಜಯ್ ತಾಯಿಯ ಪಾತ್ರದಲ್ಲಿ ಸುಮಲತಾ ಅಂಬರೀಷ್ ಬಣ್ಣ ಹಚ್ಚಿದ್ದಾರೆ. ಅಜಯ್‌ಗೆ ಇದು 25ನೇ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT