ಭಾನುವಾರ, ಜನವರಿ 19, 2020
28 °C

ಬಾಲಣ್ಣನ ಸಿಟ್ಟು ಮತ್ತು ಅಂತಃಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಯಂಕರ ಸಿಟ್ಟು ಮತ್ತು ಹಾಸ್ಯಪ್ರವೃತ್ತಿಗೆ ಹೆಸರಾದ ತೆಲುಗು ನಟ ನಂದಮೂರಿ ಬಾಲಕೃಷ್ಣ ಮಾನವೀಯತೆ ಮತ್ತು ಅಂತಃಕರಣದ ಸ್ವಭಾವ ಕೂಡ ಎಲ್ಲರಿಗೂ ತಿಳಿದಿರುವ ವಿಷಯ. ನಟ ಪಿ. ವಿಜಯ್‌ ಕುಮಾರ್‌ ಅವರ ಕ್ಯಾನ್ಸರ್‌ ಪೀಡಿತ ಪತ್ನಿಗೆ ನೆರವು ನೀಡಿದ್ದಾರೆ. ರಾಮ್‌ ಗೋಪಾಲ್‌ ವರ್ಮಾ ಅವರ ‘ಲಕ್ಷ್ಮಿ ಎನ್‌ಟಿಆರ್‌’ ಚಿತ್ರದಲ್ಲಿ ಪಿ. ವಿಜಯಕುಮಾರ್‌ ಅವರು ಎನ್‌ಟಿಆರ್‌ ಪಾತ್ರದಲ್ಲಿ ಮಿಂಚಿದ್ದರು. 

ಪತ್ನಿಗೆ ದುಬಾರಿ ಚಿಕಿತ್ಸೆಯ ವೆಚ್ಚ ಭರಿಸಲು ವಿಜಯ್‌ ಕುಮಾರ್‌ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಎನ್‌ಟಿಆರ್‌ ಕುಟುಂಬ ನಡೆಸುತ್ತಿರುವ ಬಸವತಾರಕಂ ಟ್ರಸ್ಟ್‌ನ ಕ್ಯಾನ್ಸರ್ ಆಸ್ಪತ್ರೆಗೆ ತಮ್ಮ ಪತ್ನಿಯನ್ನು ಸೇರಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣ ನಟ ಬಾಲಕೃಷ್ಣ ಅವರು ಉಚಿತ ಚಿಕಿತ್ಸೆಗೆ ಎಲ್ಲ ಏರ್ಪಾಡು ಮಾಡಿದ್ದಾರೆ. ವಿಜಯ್‌ ಪತ್ನಿ ಆರೈಕೆಗೆ ವಿಶೇಷ ಕಾಳಜಿ ವಹಿಸುವಂತೆ ವೈದ್ಯರಿಗೆ ಸೂಚಿಸಿದ್ದಾರೆ. 

ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅನಂತಪುರ ಜಿಲ್ಲೆಯ ಸ್ವಪ್ನಾ ಎಂಬ ಬಾಲಕಿಗೆ ಬಾಲಕೃಷ್ಣ ನೆರವು ನೀಡಿದ್ದರು. ತಮ್ಮ ಕುಟುಂಬದ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದರು. ರೂಲರ್‌ ಚಿತ್ರದ ಹೀನಾಯ ಸೋಲಿನಿಂದ ಹೊರಬಂದಿರುವ ಬಾಲಕೃಷ್ಣ ಸದ್ಯ ಬೋಯಾಪಟಿ ಶ್ರೀನು ನಿರ್ದೇಶನದ ಚಿತ್ರದ ಶೂಟಿಂಗ್‌ಗೆ ಸಜ್ಜಾಗುತ್ತಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು