ಬುಧವಾರ, ಮಾರ್ಚ್ 29, 2023
23 °C

ವಿಡಿಯೊ: 'ಪವಿತ್ರಾ' ಬಂಧನಕ್ಕೆ ಸಿದ್ಧರಾದ ತೆಲುಗು ನಟ ನರೇಶ್‌

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು ನಟ ನರೇಶ್ ಟ್ವಿಟರ್ ಮೂಲಕ ವಿಶೇಷ ವಿಡಿಯೊ ಬಿಡುಗಡೆ ಮಾಡಿದ್ದು, ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭಾಶಯ ಕೋರುವುದರ ಮೂಲಕ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. 

ವಿಡಿಯೊವನ್ನು ಬಿಡುಗಡೆ ಮಾಡಿರುವ ನರೇಶ್‌ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹಾಗೇ ನಟಿ ಪವಿತ್ರಾ ಲೋಕೇಶ್‌ ಜೊತೆ ಇರುವ ವಿಡಿಯೊ ಹಂಚಿಕೊಂಡಿದ್ದಾರೆ. 

ಓದಿ...  ನರೇಶ್ ಜೊತೆಯಲ್ಲಿ ಪವಿತ್ರಾ ಲೋಕೇಶ್‌: ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ರಮ್ಯಾ

ವಿಡಿಯೊದಲ್ಲಿ ಹೊಸ ವರ್ಷಕ್ಕೆ ಪವಿತ್ರಾ ಜೊತೆಯಲ್ಲಿ ಕೇಕ್‌ ಕತ್ತರಿಸಿರುವ ನರೇಶ್ ಹೊಸ ವರ್ಷಕ್ಕೆ ಪವಿತ್ರಾ ಅವರನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ಈ ಹೊಸ ವರುಷದಲ್ಲಿ ನಿಮಗೂ ನಮ್ಮ ಲೋಕಕ್ಕೆ ಆಹ್ವಾನ ಎಂದು ಹೇಳಿದ್ದಾರೆ. ಈ ಮೂಲಕ ಮದುವೆಗೆ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.  

ನಾನು ಶೀಘ್ರದಲ್ಲೇ ಮದುವೆಯಾಗಲಿದ್ದಾನೆ. ಅಭಿಮಾನಿಗಳು, ಹಿತೈಷಿಗಳು, ಗೆಳೆಯರು, ಸಿನಿಮಾರಂಗದವರು ಸೇರಿದಂತೆ ಎಲ್ಲರ ಆಶೀರ್ವಾದ ಬೇಕು ಎಂದು ಕೋರಿದ್ದಾರೆ. ಪವಿತ್ರಾ ಮತ್ತು ನರೇಶ್ ಈ ವರ್ಷದ ಕೊನೆ ದಿನ ವಿಡಿಯೊ ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಜುಲೈನಲ್ಲಿ ನಟಿ ಪವಿತ್ರಾ ಲೋಕೇಶ್ ತಮ್ಮ ಪತಿ, ತೆಲುಗು ನರೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ’ ಎಂದು ಆರೋಪಿಸಿ ರಮ್ಯಾ ರಘುಪತಿ (ನರೇಶ್‌ ಹೆಂಡತಿ) ಎಂಬುವರು ಮೈಸೂರಿನಲ್ಲಿ ನರೇಶ್–ಪವಿತ್ರಾ ಲೋಕೇಶ್‌ ತಂಗಿದ್ದ ಹೋಟೆಲ್‌ಗೆ ತೆರಳಿ ಅವರನ್ನು ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ಘಟನೆ ನಡೆದಿತ್ತು.

ನರೇಶ್‌ ಹಾಗೂ ಪವಿತಾ ಅವರು ಸದ್ಯ ರಿಲೇಶನ್‌ಶೀಫ್‌ನಲ್ಲಿದ್ದಾರೆ. ಇವರ ಸಂಬಂಧಕ್ಕೆ ನರೇಶ್ ಪತ್ನಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ತೆಲುಗು ಚಿತ್ರರಂಗದ ಕೆಲವರು ಅವರ ಸಂಬಂಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ನರೇಶ್‌ ರಮ್ಯಾ ಅವರಿಗೆ ಡಿವೋರ್ಸ್ ನೋಟಿಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ. ಇದು ಇತ್ಯಾರ್ಥವಾದ ಬಳಿಕವಷ್ಟೆ ನರೇಶ್‌–ಪವಿತ್ರಾ ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.

ಓದಿ... 

ನಾನು ಪಿಸಿಒಎಸ್‌ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ: ನಟಿ ಶ್ರುತಿ ಹಾಸನ್

ಪ್ರಶಾಂತ್ ನೀಲ್ ನಿರ್ದೇಶನ: ಪ್ರಭಾಸ್ ಅಭಿನಯದ ‘ಸಲಾರ್’ನಲ್ಲಿ ಯಶ್ ಅತಿಥಿ ಪಾತ್ರ? 

‘ಲೈಗರ್‌’ ಹೊಸ ಪೋಸ್ಟರ್ ಬಿಡುಗಡೆ: ವಿಭಿನ್ನ ಅವತಾರದಲ್ಲಿ ವಿಜಯ್‌ ದೇವರಕೊಂಡ

Video | ಇಂಗ್ಲೆಂಡ್ ವಿರುದ್ಧ ಪಂತ್ ಶತಕ: ಡಗೌಟ್‌ನಲ್ಲಿ ರಾಹುಲ್ ದ್ರಾವಿಡ್ ಸಂಭ್ರಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು