ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋಹಿನಿ 9886788888’ ಸಿನಿಮಾ ನಟಿ ಹಂಸ ನಂದಿನಿಗೆ ಸ್ತನ ಕ್ಯಾನ್ಸರ್‌

Last Updated 20 ಡಿಸೆಂಬರ್ 2021, 10:58 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಹಂಸ ನಂದಿನಿ 3ನೇ ಹಂತದ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹಂಸ ನಂದಿನಿ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಮೂರನೇ ಹಂತದ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 9 ಹಂತಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಅವರು ಪ್ರಕಟಿಸಿದ್ದಾರೆ. ಅವರ ಈ ಸ್ಥಿತಿಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕೂದಲು ಇಲ್ಲದ ತಲೆಯ ಫೋಟೋವನ್ನು ಶೇರ್‌ ಮಾಡಿರುವ ಅವರು ಚಿಕಿತ್ಸೆ ಪಡೆಯುತ್ತಿರುವುದ್ದಾಗಿ ಬರೆದುಕೊಂಡಿದ್ದಾರೆ. ಅವರ ಪಾಸಿಟಿವಿಟಿ ನಡೆಯು ಅಭಿಮಾನಿಗಳಿಗೆ ಇಷ್ಟವಾಗಿದೆ. ಮತ್ತೊಂದು ಸ್ತನಕ್ಕೂ ಕ್ಯಾನ್ಸರ್​ ಹಬ್ಬುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಬರೆದಿದ್ದಾರೆ.

ಈ ಕ್ಯಾನ್ಸರ್‌ನಿಂದ ನಾನು ಭಯಗೊಂಡಿಲ್ಲ, ಕಷ್ಟಗಳನ್ನು ಧೈರ್ಯದಿಂದಎದುರಿಸುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿರುವುದಾಗಿ ಟಾಲಿವುಡ್‌ ಮೂಲಗಳು ತಿಳಿಸಿವೆ.

ಹಂಸ ನಂದಿನಿ ಅವರು ಸಿನಿಮಾರಂಗಕ್ಕೆ 2004ರಲ್ಲಿ ಪಾದಾರ್ಪಣೆ ಮಾಡಿದ್ದರು. ಅವರು ಕನ್ನಡದಲ್ಲಿ ‘ಮೋಹಿನಿ 9886788888’ ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರು ಮೋಹಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಹೆಚ್ಚು ತೆಲುಗು ಸಿನಿಮಾಗಳಲ್ಲಿ ಹಂಸ ನಟಿಸಿದ್ದಾರೆ.

ಈಗ, ಲೌಕ್ಯಂ, ಲೆಜೆಂಡ್‌, ರುದ್ರಮ್ಮದೇವಿ, ಪಂತಂ ಸೇರಿದಂತೆ ತೆಲುಗಿನ ಹಲವು ಹಿಟ್‌ ಚಿತ್ರಗಳಲ್ಲಿ ಹಂಸ ನಟಿಸಿದ್ದಾರೆ. ಅವರು ಕಿರುತೆರೆ, ಪ್ಯಾಶನ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT