ಬುಧವಾರ, ಜೂನ್ 23, 2021
21 °C

ತೆಲುಗು ಚಿತ್ರ ನಿರ್ಮಾಪಕ ಬಿ.ಎ ರಾಜು ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗು ಚಿತ್ರ ನಿರ್ಮಾಪಕ ಮತ್ತು ಹಿರಿಯ ಪತ್ರಕರ್ತ ಬಿ.ಎ ರಾಜು (62) ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾದರು ಎಂದು ಮೂಲಗಳು ತಿಳಿಸಿವೆ.

‘ಏಕಾಏಕಿ ರಕ್ತದಲ್ಲಿ ಸಕ್ಕರೆ ಪ್ರಮಾಣದಲ್ಲಿ ಏರಿಳಿತ ಉಂಟಾಗಿದೆ. ಅದರೊಂದಿಗೆ ಹೃದಯಾಘಾತವೂ ಸಂಭವಿಸಿದೆ. ಈ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು’ ಎಂದು ಅವರ ಮಗ ಬಿ.ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ರಾಜು ಅವರು ಸಿನಿಮಾ ಪತ್ರಕರ್ತನಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸಿನಿಮಾ ನಿರ್ಮಾಪಕರಾದರು. ರಾಜು ಅವರು ಹಲವು ವರ್ಷಗಳವರೆಗೆ ‘ಸೂಪರ್‌ ಹಿಟ್‌’ ಎಂಬ ಸಿನಿಮಾ ನಿಯತಕಾಲಿಕೆಯನ್ನು ನಡೆಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು