ಮಂಗಳವಾರ, ಮಾರ್ಚ್ 28, 2023
31 °C

ಅ. 2ಕ್ಕೆ ಒಟಿಟಿಯಲ್ಲಿ ‘ನಿಶ್ಯಬ್ದಂ’ ಚಿತ್ರ ಬಿಡುಗಡೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನಿಶ್ಯಬ್ದಂ’ –ನಟಿ ಅನುಷ್ಕಾ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್‌ ಮಧುಕರ್ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ಚಿತ್ರ. ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದ ಹಲವು ಸಿನಿಮಾಗಳು ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಈ ನಡುವೆಯೇ ತೆರೆಗೆ ಸಜ್ಜಾಗಿರುವ ‘ನಿಶ್ಯಬ್ದ’ ಕೂಡ ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯೇ ಎಂಬ ಅನುಷ್ಕಾ ಶೆಟ್ಟಿಯ ಅಭಿಮಾನಿಗಳ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

‌ಈ ಹಿಂದೆಯೇ ಚಿತ್ರತಂಡ ಪ್ರಸಿದ್ಧ ಒಟಿಟಿ ವೇದಿಕೆ ಜೊತೆಗೆ ಚಿತ್ರ ಬಿಡುಗಡೆ ಸಂಬಂಧ ಮಾತುಕತೆ ನಡೆಸಿತ್ತು ಎಂಬ ಸುದ್ದಿ ಹರಡಿತ್ತು. ಆದರೆ, ನಿರ್ಮಾಪಕರು ಇದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಈಗ ಈ ಚಿತ್ರ ಅಕ್ಟೋಬರ್‌ 2ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.‌

ಶೀಘ್ರವೇ, ಅಮೆಜಾನ್‌ ಪ್ರೈಮ್ ಜೊತೆಗೆ ಚಿತ್ರದ ನಿರ್ಮಾಪಕರು ಒ‍ಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಆ ನಂತರ ಅಧಿಕೃತವಾಗಿ ಚಿತ್ರ ಬಿಡುಗಡೆಯ ಘೋಷಣೆ ಹೊರಬೀಳಲಿದೆಯಂತೆ. 

ಇದು ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗಿದೆ. ತಮಿಳಿನಲ್ಲಿ ‘ಸೈಲೆಂಟ್‌’ ಎಂಬ ಶೀರ್ಷಿಕೆ ಇಡಲಾಗಿದೆ. ಕಳೆದ ಏಪ್ರಿಲ್‌ನಲ್ಲಿಯೇ ಚಿತ್ರತಂಡ ಸಿನಿಮಾ ಬಿಡುಗಡೆಗೆ ನಿರ್ಧರಿಸಿತ್ತು. ಕೊರೊನಾ ಪರಿಣಾಮ ಬಿಡುಗಡೆಯು ಮುಂದೂಡಿಕೆಯಾಗಿತ್ತು.

ನಾನಿ ನಟನೆಯ ‘ವಿ’ ಚಿತ್ರದ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ತೆಲುಗಿನ ಬಹುಮುಖ್ಯ ಚಿತ್ರ ಇದಾಗಿದೆ. ಪೀಪಲ್‌ ಮೀಡಿಯಾ ಫ್ಯಾಕ್ಟರಿ ಮತ್ತು ಕೋನಾ ಫಿಲ್ಮ್‌ ಕಾರ್ಪೋರೇಷನ್‌ನಡಿ ಇದಕ್ಕೆ ಬಂಡವಾಳ ಹೂಡಲಾಗಿದೆ. ಶಾಲಿನಿ ಪಾಂಡೆ, ಮಾಧವನ್‌, ಅಂಜಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು