ಆದಿತ್ಯ ನಾಯಕನಾಗಿ ನಟಿಸಿರುವ ಮಾಸ್, ಆ್ಯಕ್ಷನ್ ಕಥೆಯ ‘ಟೆರರ್’ ಚಿತ್ರ ಮಾ.27ರಂದು ತೆರೆಗೆ ಬರಲಿದೆ. ರಂಜನ್ ಶಿವರಾಮ್ ಗೌಡ ನಿರ್ದೇಶನದ ಚಿತ್ರಕ್ಕೆ ಉಪ್ಪಿ ಎಂಟರ್ಟೈನರ್ಸ್ ಬ್ಯಾನರ್ ಅಡಿಯಲ್ಲಿ ಸಿಲ್ಕ್ ಮಂಜು ಬಂಡವಾಳ ಹೂಡಿದ್ದಾರೆ. ಈ ಚಿತ್ರ 2023ರಲ್ಲಿಯೇ ಸೆಟ್ಟೇರಿತ್ತು.

‘ದೇವರ ಸುತ್ತ ಒಂದಷ್ಟು ಮಾಫಿಯಾಗಳಿವೆ. ನಮ್ಮಲ್ಲಿ ಬಹುತೇಕರು ದೇವರನ್ನು ನಂಬುತ್ತಾರೆ. ಈ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಕೆಲ ದುಷ್ಟಶಕ್ತಿಗಳು ಹೇಗೆ ಕೆಲಸ ಮಾಡುತ್ತವೆ ಎಂಬುದೇ ಚಿತ್ರಕಥೆ. ಬೆಂಗಳೂರು, ಮೇಲುಕೋಟೆ, ಮಾಗಡಿ ಸುತ್ತಮುತ್ತ ಚಿತ್ರೀಕರಣಗೊಂಡಿದೆ. ಕಳೆದ ವರ್ಷವೇ ಚಿತ್ರ ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ತಡವಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕೈಲಾಶ್ ಖೇರ್ ಒಂದು ಹಾಡು ಹಾಡಿದ್ದಾರೆ’ ಎಂದರು ನಿರ್ದೆಶಕ.

ಶ್ರೀನಗರ ಕಿಟ್ಟಿ, ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ, ಧರ್ಮ, ಕೋಟೆ ಪ್ರಭಾಕರ್ ಮುಂತಾದವರು ಚಿತ್ರದಲ್ಲಿದ್ದಾರೆ. ಹರ್ಷವರ್ಧನ್ ಸಂಗೀತ, ನವೀನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.