ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಲೈವರ್‌ 168’ ನಾಯಕಿ ಕೀರ್ತಿ ಸುರೇಶ್‌

Last Updated 21 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನಟ ರಜನಿಕಾಂತ್‌ ಅಭಿನಯದ 168ನೇ ಚಿತ್ರ ‘ತಲೈವರ್‌ 168’ ಸಿನಿಮಾದ ನಾಯಕಿಯಾಗಿ ಕೀರ್ತಿ ಸುರೇಶ್‌ ನಟಿಸಲಿದ್ದಾರೆ.

ಇತ್ತೀಚೆಗೆ 27ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಕೀರ್ತಿ ಅವರನ್ನು ಮತ್ತೊಂದು ದೊಡ್ಡ ಸಿನಿಮಾದ ಅವಕಾಶವೊಂದು ಹುಡುಕಿಕೊಂಡು ಬಂದಿದೆ. ‘ತಲೈವರ್‌ 168’ ಚಿತ್ರದಲ್ಲಿ ಈ ಬಹುಭಾಷಾ ನಟಿ ರಜನಿಕಾಂತ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

‘ವಿಶ್ವಾಸಂ’ ಸಿನಿಮಾ ನಿರ್ದೇಶಿಸಿದ್ದ ಸಿರುತೈ ಶಿವ ಅವರೇ ಸೂಪರ್‌ ಸ್ಟಾರ್‌ ಅವರ ಈ ಹೊಸ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಕೀರ್ತಿ ಸುರೇಶ್‌ ಅವರು ರಜನಿಕಾಂತ್‌ ಅವರ ಹರೆಯದ ಪಾತ್ರದ ಗೆಳತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಎಂದಿರನ್’ ಮತ್ತು ‘ಪೆಟ್ಟಾ’ ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.

ಈ ಚಿತ್ರದಲ್ಲಿ ರಜನಿಕಾಂತ್‌ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಮತ್ತೊಂದು ಪಾತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಆ ಪಾತ್ರಕ್ಕೆ ಮಂಜು ವಾರಿಯರ್‌ ಹಾಗೂ ಜ್ಯೋತಿಕಾ ಹೆಸರು ಕೇಳಿಬರುತ್ತಿದೆ.

‘ಚಂದ್ರಮುಖಿ’ ಚಿತ್ರದಲ್ಲಿ ಜ್ಯೋತಿಕಾ, ರಜನಿಕಾಂತ್‌ ಜೊತೆ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT