ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಈ ವರ್ಷ ಜನವರಿಯಲ್ಲಿಯೇ ತೆರೆ ಕಾಣಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಚಿತ್ರ ಬಿಡುಗಡೆ ಇನ್ನಷ್ಟು ಮುಂದಕ್ಕೆ ಹೋಗಿದೆ.

‘ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ಬಳಿಕವೇ ಈ ಚಿತ್ರದತ್ತ ಗಮನಹರಿಸಲು ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಆಲೋಚಿಸಿದೆ’ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಜೂ.4ರಂದು ತೆರೆ ಕಾಣಲಿದೆ. ಜುಲೈ ಅಥವಾ ಸೆಪ್ಟೆಂಬರ್ನಲ್ಲಿ ‘ಜನ ನಾಯಗನ್’ ತೆರೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.

ಚಿತ್ರ ಬಿಡುಗಡೆ ಮುಂದೂಡಿ ಎರಡು ತಿಂಗಳು ಕಳೆದರೂ ಈತನಕ ಸೆನ್ಸಾರ್ ಆಗಿಲ್ಲ. ಸೂಕ್ತ ಕಾರಣವಿಲ್ಲದೆ ಪದೇ ಪದೇ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಿರುವುದು ವಿಜಯ್ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿತ್ತು.

ಮಾ.9ರಂದು ಸೆನ್ಸಾರ್ ಮಂಡಳಿ ಚಿತ್ರ ಮರು ವೀಕ್ಷಣೆ ಮಾಡಬೇಕಿತ್ತು. ಮಂಡಳಿ ಸದಸ್ಯರೊಬ್ಬರ ಅನಾರೋಗ್ಯ ಕಾರಣ ನೀಡಿ ಅದು ಮಾ.17ಕ್ಕೆ ಮುಂದಕ್ಕೆ ಹೋಗಿತ್ತು. ಆದರೆ ಈ ಪರಿಷ್ಕೃತ ದಿನಾಂಕದಂದೂ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿಲ್ಲ. ಅದಕ್ಕೆ ಸೂಕ್ತ ಕಾರಣವನ್ನೂ ನೀಡಿಲ್ಲ.

ಏನಿದು ವಿವಾದ?

ಎಚ್.ವಿನೋತ್ ನಿರ್ದೇಶಿಸಿ, ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ಈ ಸಿನಿಮಾ ತಮಿಳು ಚಿತ್ರೋದ್ಯಮಕ್ಕೆ ಬಹುನಿರೀಕ್ಷಿತ ಚಿತ್ರ. 2025ರ ಡಿಸೆಂಬರ್ನಲ್ಲಿಯೇ ಚಿತ್ರದ ಸೆನ್ಸಾರ್ಗೆ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಅರ್ಜಿ ಸಲ್ಲಿಸಿತ್ತು. ತಮಿಳುನಾಡಿನ ಅತಿದೊಡ್ಡ ಹಬ್ಬವಾದ ಸಂಕ್ರಾಂತಿಗೆ ಸಿನಿಮಾವನ್ನು ತೆರೆಗೆ ತರುವ ಯೋಚನೆ ನಿರ್ಮಾಣ ಸಂಸ್ಥೆಯದ್ದಾಗಿತ್ತು. ಆದರೆ ಸಿನಿಮಾದಲ್ಲಿ ರಾಜಕೀಯ ಅಂಶಗಳು ಮತ್ತು ಸಂಭಾಷಣೆಗಳು ಇರುವುದರಿಂದ ಒಂದಷ್ಟು ದೃಶ್ಯಗಳನ್ನು ಪರಿಷ್ಕರಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿತ್ತು. ಬದಲಾವಣೆ ಬಳಿಕದ ಪರಿಷ್ಕೃತ ಆವೃತ್ತಿಯನ್ನು ವೀಕ್ಷಿಸಲು ಸೆನ್ಸಾರ್ ಮಂಡಳಿ ವಿಳಂಬ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.