ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ನಟ, ಅಭಿಮಾನಿಗಳ ನೆಚ್ಚಿನ ದಳಪತಿ ವಿಜಯ್ ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲು ಎದುರು ನೋಡುತ್ತಿದ್ದಾರೆ. ನಿನ್ನೆ (ಮೇ4) ಮುಕ್ತಾಯಗೊಂಡ ಮತ ಎಣಿಕೆಯಲ್ಲಿ 108 ಸ್ಥಾನಗಳಲ್ಲಿ ವಿಜಯ್ ಅವರ ಟಿವಿಕೆ ಪಕ್ಷವು ಜಯಬೇರಿ ಬಾರಿಸಿದೆ. ವಿಜಯ್ ಅವರು 2024ರಲ್ಲಿ ಪಕ್ಷ ಸ್ಥಾಪನೆ ಮಾಡಿದ್ದರು. ಆದರೆ, ಅವರು ರಾಜಕೀಯಕ್ಕೆ ಬರಲು 2018ರಿಂದಲೇ ಸಿದ್ಧತೆ ಆರಂಭಿಸಿದ್ದರು.

2018ರ ನವೆಂಬರ್ ತಿಂಗಳಿನಲ್ಲಿ ತೆರೆಕಂಡ ‘ಸರ್ಕಾರ್’ ಎಂಬ ಚಿತ್ರದ ಮೂಲಕ ವಿಜಯ್ ಅವರು ತಮಿಳುನಾಡಿನ ರಾಜಕೀಯ ಕಲ್ಪನೆಗೆ ಕಾಲಿಟ್ಟಿದ್ದರು. ಸಿನಿಮಾದಲ್ಲಿ ವಿಜಯ್ ಅವರು ಸುಂದರ್ ರಾಮಸ್ವಾಮಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಅವರು ಸಿನಿಮಾದಲ್ಲಿ ಯಶಸ್ವಿ ಉದ್ಯಮಿಯಾಗಿದ್ದು, ಆಕಸ್ಮಿಕವಾಗಿ ಭಾರತಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ಅವರು ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸುತ್ತಾರೆ. ಆದರೆ, ಅವರ ಹೆಸರಿನಲ್ಲಿ ಅಕ್ರಮವಾಗಿ ಮತ ಚಲಾವಣೆಯಾಗಿದ್ದರಿಂದ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಾರೆ.

ಮುಂದಿನದು ಚುನಾವಣಾ ವಂಚನೆ, ರಾಜಕೀಯ ಭ್ರಷ್ಟಾಚಾರ ಮತ್ತು ಮತದಾರರನ್ನು ಓಲೈಸುವ, ಅವರನ್ನು ಮೋಸ ಮಾಡುವ ವ್ಯವಸ್ಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅಂತಿಮವಾಗಿ ವಿಜಯ್ ಅವರ ನೇತೃತ್ವದಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ.

ಆ ಸಿನಿಮಾವು ಉತ್ತಮ ಗಳಿಕೆಯ ಜೊತೆಗೆ ಹಿಟ್ ಕೂಡ ಆಗುತ್ತದೆ. ಇದೀಗ ಸರ್ಕಾರ್ ಸಿನಿಮಾ ಬಿಡುಗಡೆಯಾಗಿ 8 ವರ್ಷಗಳ ಬಳಿಕ ಅವರು ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿ ಅಧಿಕಾರದ ಸಮೀಪಕ್ಕೆ ತಂದು ನಿಲ್ಲಿಸಿದ್ದಾರೆ. ಬೇರೆ ಯಾವುದೇ ಪಕ್ಷದ ಬೆಂಬಲ ಇಲ್ಲದೆ ಪಕ್ಷವನ್ನು ಅಧಿಕಾರದತ್ತ ಮುನ್ನಡೆಸಿರುವ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏರುವುದು ಬಹುತೇಖ ಖಚಿತವಾಗಿದೆ.

2024ರಲ್ಲಿ ಸ್ಥಾಪನೆಯಾದ ಟಿವಿಕೆ ಪಕ್ಷವು ಮೊದಲು ಬೂತ್ ಮಟ್ಟದಲ್ಲಿ ತನ್ನ ಕಾರ್ಯಕರ್ತರನ್ನು ಬಲಪಡಿಸಿಕೊಂಡಿತು. 234 ಕ್ಷೇತ್ರಗಳಾದ್ಯಂತ ಬೂತ್ ಮಟ್ಟದ ಸಂಘಟನೆ ಜನರಿಗೆ ಯಾವುದರ ಅಗತ್ಯವಿದೆ ಎಂಬುದನ್ನು ಅರಿತುಕೊಂಡ ವಿಜಯ್ ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವ ಮತದಾರರು, ಕೂಲಿ ಕಾರ್ಮಿಕರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

2021 ರಲ್ಲಿ ಬೃಹತ್ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದ ಡಿಎಂಕೆ ಪಕ್ಷವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವ ಪರಿಸ್ಥಿತಿ ಎದುರಾಗಿದೆ. 8 ವರ್ಷಗಳ ಹಿಂದೆ ಸರ್ಕಾರ್ ಸಿನಿಮಾದಲ್ಲಿ ರಾಜಕೀಯ ವಿರೋಧಿಯಾಗಿದ್ದ ಪಕ್ಷವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದ ವಿಜಯ್ ಸದ್ಯ, ನಿಜ ರಾಜಕಾರಣದಲ್ಲೂ ತನ್ನ ರಾಜಕೀಯ ಎದುರಾಳಿಗಳಾದ ಡಿಎಂಕೆ ಹಾಗೂ ಎಐಡಿಐಎಂಕೆ ಪಕ್ಷಗಳನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

2018ರಲ್ಲಿ ಬಿಡುಗಡೆಯಾಗಿದ್ದ ಸರ್ಕಾರ್ ಚಿತ್ರದ ನಂತರ ಭಾರತ ಚುನಾವಣಾ ಆಯೋಗವು, ಯಾರಾದರೂ ತಮ್ಮ ಹೆಸರಿನಲ್ಲಿ ಮೋಸದಿಂದ ಮತ ಚಲಾಯಿಸಿದರೆ, ಅವರ ಮದಾನದ ಹಕ್ಕನ್ನು ಹಿಂಪಡೆಯಲಾಗುವುದು ಎಂದು ಹೇಳಿತ್ತು. ಮತದಾನದ ಜಾಗೃತಿ ಮೂಡಿಸಲು ಮತ್ತು ಮತದಾನದ ಕಾನೂನು ಬದ್ಧ ಹಕ್ಕಿನ ಕುರಿತು ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಈ ಸಿನಿಮಾದ ಕಥಾ ವಸ್ತುವನ್ನು ಬಳಸಿಕೊಂಡಿತ್ತು.

ಆ ಚಿತ್ರದಲ್ಲಿ, ವಿಜಯ್ ಅವರ ಸುಂದರ್ ರಾಮಸ್ವಾಮಿ ಪಾತ್ರದಲ್ಲಿ ಜನರ ಮುಂದೆ ನಿಂತು ಒಂದು ಮನವಿ ಮಾಡಿದ್ದರು. ‘ದಯವಿಟ್ಟು ಹೋಗಿ ಮತ ಚಲಾಯಿಸಿ, ನಿಮಗೆ ಕೊಟ್ಟಿರುವ ಹಕ್ಕನ್ನು ಬಳಸಿಕೊಳ್ಳಿ. ಅದನ್ನು ಬೇರೆಯವರು ನಿಮ್ಮಿಂದ ಕಸಿದುಕೊಳ್ಳಲು ಬಿಡಬೇಡಿ. ನಿಮ್ಮ ಮತವನ್ನು ವ್ಯರ್ಥವಾಗಲು ಬಿಡಬೇಡಿ’ ಎಂದು ಹೇಳಿದ್ದರು.

ಆ ಸಿನಿಮಾ ಬಿಡುಗಡೆಯಾಗಿ 8 ವರ್ಷಗಳ ಬಳಿಕ ನಡೆದ ತಮಿಳುನಾಡು ಚುನಾವಣೆಯಲ್ಲಿ ದಾಖಲೆಯ ಶೇಕಡಾ 85.1ರಷ್ಟು ಮತ ಚಲಾವಣೆಯಾಗಿತ್ತು. ಇದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ದಾಖಲಾದ ಅತ್ಯಧಿಕ ಮತದಾನವಾಗಿದೆ. ರಾಜ್ಯದ 38 ಜಿಲ್ಲೆಗಳ ಪೈಕಿ 32 ಜಿಲ್ಲೆಗಳಲ್ಲಿ, ನೋಂದಾಯಿತ ಮತದಾರರಲ್ಲಿ ಶೇ. 80 ಕ್ಕಿಂತ ಹೆಚ್ಚು ಜನರು ಮತದಾನದಲ್ಲಿ ಭಾಗವಹಿಸಿದ್ದರು. ಕೆಲವು ಕ್ಷೇತ್ರಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನ ನಡೆದಿದೆ.

ಸದ್ಯ, ಸರ್ಕಾರ್ ಸಿನಿಮಾದ ಸಂದರ್ಭದಲ್ಲಿ ಆರಂಭವಾದ ಅವರ ರಾಜಕೀಯದ ತಯಾರಿ ಈಗ ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಹಂತಕ್ಕೆ ತಂದು ನಿಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.