‘ಮುಖ್ಯಮಂತ್ರಿ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಕಾಲಿಡುವ ಮುನ್ನ ‘ಕರುಪ್ಪು’ ಸಿನಿಮಾವು ಅವರ ನಟನೆಯ ಕೊನೆಯ ಸಿನಿಮಾವಾಗಬೇಕಿತ್ತು’ ಎಂದು ನಿರ್ದೇಶಕ, ನಟ ಆರ್.ಜೆ ಬಾಲಾಜಿ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

2026ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಅವರು ಅಧಿಕಾರ ಪಡೆದುಕೊಂಡಿದ್ದಾರೆ. ಅವರ ನಟನೆಯ ಕೊನೆಯ ಚಿತ್ರ ‘ಜನನಾಯಗನ್’ ಆಗಿದೆ. ಆದರೆ ಇತ್ತೀಚೆಗೆ ಆರ್.ಜೆ ಬಾಲಾಜಿ ಅವರ ನಿರ್ದೇಶನದಲ್ಲಿ ಮೂಡಿಬಂದ ಕರುಪ್ಪು ಸಿನಿಮಾದಲ್ಲಿ ವಿಜಯ್ ನಟಿಸಲು ಮಾತುಕತೆ ನಡೆದಿತ್ತು. ಆದರೆ ಕೊನೆಯ ಹಂತದಲ್ಲಿ ವಿಜಯ್ ನಿರಾಕರಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಜೊತೆಗಿನ ಸಂಭಾಷಣೆಯಲ್ಲಿ, ಈ ಸಿನಿಮಾ ವಿಜಯ್ ಅವರ ಕೈ ತಪ್ಪಿದ್ದು ಹೇಗೆ ಎಂಬುದನ್ನು ಆರ್ಜೆ ಬಾಲಾಜಿ ಅವರು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಯಶಸ್ಸಿನ ಕುರಿತು ಮಾತನಾಡಿದ್ದಾರೆ.

‘ಕರುಪ್ಪು ಸಿನಿಮಾದ ಚಿತ್ರಕಥೆಯನ್ನು ಬರೆಯುವಾಗ ಕೆಲವು ಬಾರಿ ವಿಜಯ್ ಅವರನ್ನು ಭೇಟಿಯಾಗಿ ಚರ್ಚಿಸಲಾಗಿತ್ತು. ರಾಜಕೀಯವನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದ್ದ ವಿಜಯ್ ಅವರ ಅಂತಿಮ ಚಿತ್ರ ಹೇಗಿರಬೇಕು ಎಂಬುದರ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಆದರೆ ವಿಜಯ್ ಅವರು ಅಂತಿಮವಾಗಿ ಸಿನಿಮಾದಲ್ಲಿ ನಟಿಸಲು ಒಪ್ಪಲಿಲ್ಲ’ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

‘ಅಂದು ಅವರು ಸಿನಿಮಾದಲ್ಲಿ ನಟಿಸಲು ನಿರಾಕರಿಸಿ, ನೀಡಿದ ಕಾರಣಗಳು ಸಮರ್ಥನೀಯವೆಂದು ನಾನು ಭಾವಿಸಿದೆ. ಮಾತ್ರವಲ್ಲದೆ, ವಿಜಯ್ ಅವರಿಗೆ ನಾನು ನಿಮ್ಮ ನಿರ್ಧಾರವನ್ನು ಗೌರವಿಸುತ್ತೇನೆ, ತುಂಬಾ ಧನ್ಯವಾದಗಳು ಎಂದು ಹೇಳಿದ್ದೆ. ಏಕೆಂದರೆ ಆ ಹೊತ್ತಿಗಾಗಲೇ ಅವರ ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದೆ’ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

’ವಿಜಯ್ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪದಿದ್ದರೂ, ಚಿತ್ರಕಥೆ ಬರೆಯುವ ಸಂದರ್ಭದಲ್ಲಿ ನೀಡಿದ ಸಲಹೆಗಳಿಂದ ಸಿನಿಮಾದ ಸ್ಕಿಪ್ಟ್ ಉತ್ತಮವಾಯಿತು. ಸಿನಿಮಾ ಕೂಡ ಯಶಸ್ಸು ಕಾಣುತ್ತಿದೆ. ಆದ್ದರಿಂದ ವಿಜಯ್ ಅವರಿಗೆ ಧನ್ಯವಾದಗಳು‘ ಎಂದು ಬಾಲಾಜಿ ಅವರು ಹೇಳಿಕೊಂಡಿದ್ದಾರೆ.

ಸಕ್ನಿಲ್ಕ್ ವರದಿ ಪ್ರಕಾರ, ಕರುಪ್ಪು ಸಿನಿಮಾ ವಿಶ್ವದಾದ್ಯಂತ ₹253.26 ಕೋಟಿ ಗಳಿಸಿದೆ. ಭಾರತದಲ್ಲಿ ₹184.26 ಕೋಟಿಯನ್ನು ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.