ಚೆನ್ನೈ: ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ಇತ್ತೀಚೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

ವಸತಿ ಸೌಕರ್ಯದ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು, ಕಾನೂನು ರಕ್ಷಣೆ ಕೋರಿದ್ದಾರೆ. ವಿಚ್ಛೇದನ ಪ್ರಕರಣ ಇತ್ಯರ್ಥವಾಗುವವರೆಗೆ ಈಗ ನೆಲೆಸಿರುವ ನೀಲಂಕರೈನಲ್ಲಿರುವ ಮನೆಯಲ್ಲಿಯೇ ವಾಸಿಸಲು ಅನುವು ಮಾಡಿಕೊಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
.ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೆ ತ್ರಿಷಾ ಜತೆ ಕಾಣಿಸಿದ ದಳಪತಿ ವಿಜಯ್.ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ, ಮಗನಿಂದಲೂ ದೂರವಾಗ್ತಾರಾ ದಳಪತಿ ವಿಜಯ್?.
ಕಾನೂನು ಪ್ರಕ್ರಿಯೆ ಸಮಯದಲ್ಲಿ ನನ್ನನ್ನು ಮನೆಯಿಂದ ಹೊರಹಾಕಬಹುದು. ಹೀಗಾಗಿ ಈಗ ಇರುವ ಮನೆಯಲ್ಲಿಯೇ ಉಳಿದುಕೊಳ್ಳಲು ಅನುಮತಿ ನೀಡುವಂತೆ ಅವರು ಕೋರಿದ್ದಾರೆ.

ವಿಚ್ಛೇದನದ ಅರ್ಜಿಯಲ್ಲಿ ಜೀವಾಂಶ ಕುರಿತು ಸಂಗೀತಾ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.‘ನನ್ನ ಪತಿಯು ನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ. ನನಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದು, ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.ಚೆಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಏ. 20ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ
.ಹೊರ್ಮುಜ್ನಲ್ಲಿ ಹಡಗುಯಾನ ಅಡಚಣೆಗೆ ಯುದ್ಧ ಮಾತ್ರವಲ್ಲ, ವಿಮಾ ಕಂಪನಿಗಳೂ ಕಾರಣ.ಇರಾನ್ ಹಡಗಿನ ತುರ್ತು ನಿಲುಗಡೆಗೆ ಅವಕಾಶ ನೀಡಿದ್ದ ಭಾರತ: ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.