ಬುಧವಾರ, ಜುಲೈ 15, 2020
25 °C

ಹರಿಕಥೆ ಅಲ್ಲಾ... ಗಿರಿಕಥೆಗಾಗಿ ನಾಯಕಿಯ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಿರಿಕಥೆ ಸಿನಿಮಾ

ಸಂದೇಶ್ ಪ್ರೊಡಕ್ಷನ್ಸ್ ಮತ್ತು ರಿಷಬ್ ಶೆಟ್ಟಿ ಫಿಲಂಸ್‌ ಸಹಭಾಗಿತ್ವದಡಿ ನಿರ್ಮಾಣವಾಗುತ್ತಿರುವ ‘ಹರಿಕಥೆ ಅಲ್ಲಾ...ಗಿರಿಕಥೆ’ ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ನಟಿಸಿದ್ದ ಗಿರಿಕೃಷ್ಣ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ‘ಬೆಲ್‌ ಬಾಟಂ’ ಚಿತ್ರದ ಮೂಲಕ ನಾಯಕನಾಗಿ ಯಶಸ್ಸು ಕಂಡ ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಮೊದಲ ಹಂತದ ಶೂಟಿಂಗ್‌ ಆರಂಭಿಸಲು ಸಿದ್ಧತೆಯಲ್ಲಿ ತೊಡಗಿರುವ ಚಿತ್ರತಂಡ, ಚಿತ್ರಕ್ಕೆ ನಾಯಕಿಯ ಶೋಧಕ್ಕೆ ಇಳಿದಿದೆ. ಅದರಲ್ಲೂ ಹೊಸಮುಖ ಪರಿಚಯಿಸಲು ನಿರ್ಧರಿಸಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಮಿನುಗುವ ಅವಕಾಶವನ್ನು ಹೊಸ ಪ್ರತಿಭೆಗಳಿಗೆ ಮುಕ್ತವಾಗಿ ತೆರೆದಿಟ್ಟಿದೆ! 

ಇಂದಿನ ತಲೆಮಾರಿನ ಯುವಜನರಿಗೆ ಸಂಬಂಧಿಸಿದ ಕಥಾಹಂದರ ಈ ಚಿತ್ರದಲ್ಲಿದೆ. ಯುವಜನರ ಹೆಣಗಾಟ, ಹುಡುಗಾಟಗಳನ್ನೇ ತೆರೆಯ ಮೇಲೆ ಹಾಸ್ಯಮಯವಾಗಿ ಹೇಳುವ ತಯಾರಿಯಲ್ಲಿದ್ದಾರೆ ನಿರ್ದೇಶಕರು.

ಓಪನ್‌ ಆಡಿಷನ್‌ ಮೂಲಕ ಅದರಲ್ಲೂ ಹೊಸ ಪ್ರತಿಭಾವಂತ ನಟಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ತನ್ನ ತಂದೆಯನ್ನು ಮೀಟ್‌ ಮಾಡಲು ತಡವಾಗಿ ಬರುವ ಪ್ರೇಮಿಯನ್ನು ಸರಿಯಾಗಿ ಕ್ಲಾಸ್‌ ತೆಗೆದುಕೊಳ್ಳುವ ಪ್ರೇಯಸಿಯಂತೆ ಅಭಿನಯಿಸಿ ಒಂದು ನಿಮಿಷ ವಿಡಿಯೊ ಕಳುಹಿಸಿಕೊಡುವ ಆಹ್ವಾನವನ್ನು ನೀಡಿದೆ. 18ರಿಂದ 28ರ ವಯೋಮಿತಿಯಲ್ಲಿರುವವರಿಗೆ ಈ ಚಿತ್ರದಲ್ಲಿ ನಾಯಕಿಯಾಗುವ ಅವಕಾಶವಿದೆ.

‘ಕಿರಿಕ್ ಪಾರ್ಟಿ’ ಸೇರಿ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದ ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ‘ಕಥಾ ಸಂಗಮ’ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ರಂಗನಾಥ್ ಸಿ.ಎಂ. ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು