ಚಿತ್ರದ ನಿರ್ಮಾಪಕಿ ಹಾಗೂ ನಾಯಕಿ ಮಿಲನ ನಾಗರಾಜ್ ಮಾತನಾಡಿ, ‘ಮೈಸೂರು, ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ಕಳಸ ಸುತ್ತಮುತ್ತ ಚಿತ್ರಿಸಲಾಗಿದ್ದು, ಇದೊಂದು ಸಂವೇದನಾಶೀಲ ಚಿತ್ರವಾಗಿದ್ದು, ಕುಟುಂಬ ಸಮೇತ ಈ ಚಿತ್ರ ವೀಕ್ಷಿಸಬಹುದು. ರಘು ದೀಕ್ಷಿತ್ ಸಂಗೀತ ನಿರ್ದೇಶನವಿದ್ದು, 5 ಹಾಡುಗಳಿವೆ. ಜ.27ಕ್ಕೆ ಮತ್ತೊಂದು ಥೀಮ್ ಸಾಂಗ್ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದರು.