ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಟಿಯಲ್ಲಿ ‘ದಿ ಪೈಂಟರ್’ ಬಿಡುಗಡೆ

Last Updated 23 ಜುಲೈ 2020, 19:45 IST
ಅಕ್ಷರ ಗಾತ್ರ

ವೆಂಕಟ ಭಾರದ್ವಾಜ್ ನಿರ್ದೇಶಿಸಿ, ನಟಿಸಿರುವ ‘ದಿ ಪೈಂಟರ್’ ಚಿತ್ರ ಶ್ರೇಯಸ್ ಎಂಟರ್‌ಟೈನ್ಮೆಂಟ್‌ನ ET-ATT ( ಇ ಥಿಯೇಟರ್‌– ಎನಿಟೈಮ್‌ ಥಿಯೇಟರ್‌) ಮೂಲಕ ಆಗಸ್ಟ್‌ ಎರಡನೇ ವಾರದಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ವಿಶ್ವದಾದ್ಯಂತ ಆನ್‌ಲೈನ್‌ ಇ ಥಿಯೇಟರ್‌ ಮೂಲಕ ಬಿಡುಗಡೆಯಾಗುತ್ತಿರುವ ಕನ್ನಡದ ಮೊಟ್ಟ ಮೊದಲ ಚಿತ್ರವಿದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಅಮೃತ ಫಿಲಂ ಸೆಂಟರ್ ಮತ್ತು ಕೆ.ಕೆ. ಕಂಬೈನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು www.ShreyasET.com ಮೂಲಕ ನೋಡಬಹುದು. ಸಿನಿಮಾವನ್ನು ಜನರ ಮನೆಗೆ ತಲುಪಿಸುವ ಹೊಸತಂತ್ರವಿದು ಎನ್ನುತ್ತಾರೆ ನಟ, ನಿರ್ದೇಶಕ ವೆಂಕಟ್ ಭಾರದ್ವಾಜ್.

ಕೊರೊನಾ ಪರಿಸ್ಥಿತಿಯನ್ನು ಕೆಲವರು ಹೇಗೆ ಒಳ್ಳೆಯದಕ್ಕೆ ಮತ್ತೆ ಕೆಲವರು ಹೇಗೆಲ್ಲಾ ಕೆಟ್ಟದಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದ ಕಥೆ ಹೇಳಲಿದೆ. ಇದು ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾಹಂದರದ ಚಿತ್ರ. 90 ನಿಮಿಷಗಳ ಚಿತ್ರವಿದು. ‌ಚೆನ್ನೈ, ಬೆಂಗಳೂರು, ಕನಕಪುರ, ಹೆಬ್ಬಾಳ, ತುಮಕೂರು ಹೀಗೆಐದು ತಾಣಗಳಲ್ಲಿ, ಐವರು ಕ್ಯಾಮೆರಾಮನ್‌ಗಳು13 ದಿನಗಳ ಕಾಲ ಶೂಟಿಂಗ್‌ ಮಾಡಿದ್ದಾರೆ. ಹಾಗೆಯೇ 20 ನಟರು ಮತ್ತು ತಂತ್ರಜ್ಞರು ಈ ಚಿತ್ರದಲ್ಲಿದ್ದಾರೆ. ಲಭ್ಯವಿದ್ದ ಸೀಮಿತ ಸೌಲಭ್ಯಗಳನ್ನೇ ಬಳಸಿಕೊಂಡು ಈ ಚಿತ್ರವನ್ನು ಮಾಡಿದ್ದೇವೆ. ಚಿತ್ರತಂಡದ ಶ್ರಮವು ಈ ಚಿತ್ರದಲ್ಲಿ ಎದ್ದುಕಾಣಲಿದೆ ಎನ್ನುತ್ತಾರೆ ಅವರು.

‘HUB ಮತ್ತು SPOKE Model’ನಲ್ಲಿ ಚಿತ್ರೀಕರಿಸಿದ ಮೊದಲ ಭಾರತೀಯ ಚಿತ್ರ ಎನ್ನುವ ಶ್ರೇಯವೂ ನಮ್ಮ ಈ ಚಿತ್ರಕ್ಕೆ ಇದೆ. ಪ್ರೇಕ್ಷಕರು ₹50 ಪಾವತಿಸಿ ಮನೆಯಲ್ಲೇ ಕುಳಿತು ಚಿತ್ರ ನೋಡಬಹುದು. ಪ್ರೇಕ್ಷಕರು ಕೊಡುವ ಹಣದಲ್ಲಿ ಶೇ 20ರಷ್ಟನ್ನು ಸಂಕಷ್ಟದಲ್ಲಿರುವ ಕನ್ನಡ ಚಲನಚಿತ್ರ ಕಾರ್ಮಿಕರ ಕುಟುಂಬಗಳಿಗೆ ದೇಣಿಗೆ ಕೊಡುವ ಒಂದು ಉದ್ದೇಶವಿದೆ. ಶೀಘ್ರದಲ್ಲೇ ಚಿತ್ರದ ಟ್ರೈಲರ್ ಮತ್ತು ಲಿರಿಕಲ್ವಿಡಿಯೊ ಕೂಡ ಬಿಡುಗಡೆಯಾಗಲಿದೆ ಎಂದಿದ್ದಾರೆ ಅವರು.

ತಾರಾಗಣದಲ್ಲಿ ವೆಂಕಟ್ ಭಾರದ್ವಾಜ್, ರಾಜ್ ಕಮಲ್, ಭಾಷಾ, ಶಿನವ್ ಕಬೀರ್ ಸೋಮಯಾಜಿ, ಶಮೀಕ್, ಉಮಾ, ಮಧುರ, ಅಜಯ್ ಲಾರೆನ್ಸ್ ಶಮಾ, ವೈಷ್ಣವಿ, ವೆಂಕಟ್ ಶಾಸ್ತ್ರಿ, ಮನೋಜ್, ಕಿರಣ್, ಮಿಥುನ್ ಮತ್ತು ಸಂಜಯ್ ಇದ್ದಾರೆ.ಕಥೆ, ಚಿತ್ರಕಥೆ ಹಾಗೂಸಂಭಾಷಣೆಯು ವೆಂಕಟ್ ಭಾರದ್ವಾಜ್ ಅವರದೇ. ಛಾಯಾಗ್ರಹಣ ಶಮೀಕ್, ಸಂಜಯ್, ಮಣಿ, ವೆಂಕಟೇಶ್ ಶಾಸ್ತ್ರಿ, ಕಬೀರ್ ಸೋಮಯಾಜಿ, ಸಂಕಲನ ಚಂದನ್ ಪಿ., ಸಂಗೀತ ಲವ್ ಪ್ರಾನ್ ಮೆಹ್ತಾ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT