‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಮೂವರು ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.
ರಶ್ಮಿಕಾ ಮಂದಣ್ಣ ಜೊತೆಗೆ ಅಭಿನಯಿಸಿದ್ದ ‘ಗೀತಾ ಗೋವಿಂದಂ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ವಿಜಯ್ ದೇವರಕೊಂಡ ಅಭಿನಯದ ‘ನೋಟಾ’ ಚಿತ್ರ ಹೀನಾಯ ಸೋಲು ಕಂಡಿತ್ತು. ಈ ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿಮುಂದಿನ ಸಿನಿಮಾವನ್ನು ವಿಜಯ್ ಒಪ್ಪಿಕೊಂಡಿದ್ದು, ಇದರಲ್ಲಿ ರಾಶಿ ಖನ್ನಾ, ಐಶ್ವರ್ಯಾ ರಾಜೇಶ್ ಹಾಗೂ ಇಸಾಬೆಲ್ಲಾ ಲೇಟ್ ನಾಯಕಿಯರಾಗಿ ನಟಿಸಲಿದ್ದಾರೆ. ಈ ಚಿತ್ರವನ್ನು ಕ್ರಾಂತಿ ಮಾಧವ್ ನಿರ್ದೇಶಿಸಲಿದ್ದಾರೆ.
ರಾಶಿ ಖನ್ನಾ ತೆಲುಗಿನಲ್ಲಿ ಜೂನಿಯರ್ ಎನ್‌ಟಿಆರ್, ರವಿ ತೇಜಾ, ಮೊದಲಾದ ನಟರೊಂದಿಗೆ ನಟಿಸಿದ್ದಾರೆ. ವಿಜಯ್‌ಗೆ ನಾಯಕಿ
ಯಾಗಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಐಶ್ವರ್ಯಾನೂ ತಮಿಳಿನ ಜನಪ್ರಿಯ ನಟಿಯಾಗಿದ್ದು, ಈಗ ಈ ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ಇಸಾಬೆಲ್ಲಾ ಅವರು ಬ್ರೆಜಿಲ್ ರೂಪದರ್ಶಿಯಾಗಿದ್ದು, ತಲಾಶ್ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.