ಶನಿವಾರ, ಜುಲೈ 31, 2021
28 °C

‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಸೂಪರ್‌ ಸ್ಟಾರ್ ಅಮೀರ್ ಖಾನ್ ಅಭಿನಯದ ‘ಥಗ್ಸ್ ಆಫ್ ಹಿಂದೋಸ್ತಾನ್ ಟ್ರೇಲರ್' ಬಿಡುಗಡೆಯಾಗಿದೆ.

ಈಸ್ಟ್ ಇಂಡಿಯಾ ಕಂಪೆನಿ ವ್ಯಾಪಾರಕ್ಕೆ ಪ್ರವೇಶಿಸುವ ದೃಶ್ಯದ ಮೂಲಕ ತೆರೆದುಕೊಳ್ಳುವ ಟ್ರೇಲರ್ ಉದ್ದಕ್ಕೂ ಯುದ್ಧವೇ ಆವರಿಸಿಕೊಂಡಿದೆ. ಸಮುದ್ರದ ಮಧ್ಯೆ ನಡೆಯುವ ಕಾದಾಟದ ದೃಶ್ಯಗಳನ್ನು ಮನೋಹರವಾಗಿ ಚಿತ್ರೀಕರಿಸಲಾಗಿದೆ.

ಇದು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ನಡೆಯುವ ಕಾಲ್ಪನಿಕ ಕಥೆಯಾಗಿದ್ದು, ಫಿಲಿಪ್ಸ್ ಮೆಡೋಸ್ ಟೇಲರ್‌ನ ಕನ್ಫೆಷನ್ಸ್ ಆಫ್ ಎ ಥಗ್ ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ. 

'1795ರ ಭಾರತ..ಈಸ್ಟ್ ಇಂಡಿಯಾ ಕಂಪೆನಿ ಬಂದದ್ದು ವ್ಯಾಪಾರಕ್ಕಾಗಿ, ಆದರೆ ಅದು ನಮ್ಮನ್ನೇ ಆಳುತ್ತಿದೆ. ಈ ಗುಲಾಮಗಿರಿ ಸಹಿಸಿಕೊಳ್ಳಲಾಗದು......' ಹೀಗೆ ಮುಂದುವರೆಯುವ ಟ್ರೇಲರ್‌ನಲ್ಲಿ  ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ಆಜಾದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಳಿವಯಸ್ಸಿನಲ್ಲಿಯೂ ಕತ್ತಿ ಹಿಡಿದು ನಡೆಸುವ ವೀರೋಚಿತ ಹೋರಾಟ ಹುಬ್ಬೇರಿಸುವಂತೆ ಮಾಡುತ್ತದೆ. 

‘ನಾನು ನಿಮ್ಮಂತೆಯೇ ಸ್ವತಂತ್ರನಾಗಬೇಕು...ನಾನು ನನ್ನ ಸ್ವತಂತ್ರವನ್ನು ಮಾರುತ್ತಿದ್ದೇನೆ, ಚೌಕಾಸಿ ಬೇಡ....’ ಎನ್ನುವ ಧೀರನಾಗಿ ಆಳುವ, ಗುಲಾಮನಾಗಿ ಬಗ್ಗುವ ಫಿರಂಗಿ ಮಲ್ಲನಾಗಿ ಎಂಟ್ರಿಯಾಗುವ ಅಮೀರ್‌ ಖಾನ್‌ ಎಲ್ಲರ ಗಮನ ಸೆಳೆದಿದ್ದಾರೆ.

3 ನಿಮಿಷ 37ಸೆಕೆಂಡ್ ಇರುವ ಈ ಟ್ರೇಲರ್‌ನ್ನು 40ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 50 ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ. ಈ ಚಿತ್ರ ಇದೇ ನವೆಂಬರ್ 8ರ ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದ್ದು, ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ, ನಿರ್ಮಾಪಕ ಅದಿತ್ಯ ಚೋಪ್ರಾ ಸಹಕಾರದಲ್ಲಿ ಮೂಡಿಬಂದಿದೆ. 

ಅಮಿತಾಬ್ ಬಚ್ಚನ್, ಅಮಿರ್ ಖಾನ್, ಕತ್ರಿನಾ ಕೈಫ್, ಫಾತೀಮಾ ಸಾನಾ ಶೇಖ್ ತಾರಾಗಣವಿದೆ. 

ಇದನ್ನೂ ಓದಿ...
ಅಮೀರ್‌ ಖಾನ್‌ ನಟನೆಯ ‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಪೋಸ್ಟರ್‌ ಟ್ರೋಲ್‌ ಆಯಿತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು