ಸೋಮವಾರ, ಜುಲೈ 4, 2022
21 °C

ಹೃತಿಕ್‌–ಟೈಗರ್‌ ಜೋಡಿ ಡಾನ್ಸ್‌ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನಲ್ಲಿ ‘ಮೋಸ್ಟ್‌ ಫಿಟ್ಟೆಸ್ಟ್ ಮ್ಯಾನ್‌’ ಎಂದೇ ಕರೆಸಿಕೊಳ್ಳುವ ಟೈಗರ್ ಶ್ರಾಫ್‌ ಈಗ ‘ಭಾಗಿ 3’ ಸಿನಿಮಾದ ಸಿದ್ದತೆಯಲ್ಲಿ ತೊಡಗಿದ್ದಾರೆ.

‘ಸ್ಟೂಡೆಂಟ್ ಆಫ್‌ ದಿ ಇಯರ್‌ 2’ ಸಿನಿಮಾಕ್ಕಾಗಿ ಇನ್ನಷ್ಟು ಹೆಚ್ಚು ಫಿಟ್‌ ಆಗಿದ್ದ ಟೈಗರ್‌ಗೆ ಈಗ ‘ಭಾಗಿ 3’ ನಲ್ಲಿ ಫೈಟಿಂಗ್ ಹಾಗೂ ಡಾನ್ಸ್‌ ಮಾಡಲು ಅದೇ ಫಿಟ್‌ನೆಸ್ ಸಹಾಯ ಮಾಡಿದೆಯಂತೆ. ಸಿದ್ದಾರ್ಥ್‌ ಆನಂದ್‌ ಅವರ ಹೆಸರಿಡದ ಸಿನಿಮಾವೊಂದರಲ್ಲಿ ಟೈಗರ್‌ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹೃತಿಕ್‌ ರೋಷನ್‌ ಕೂಡ ನಟಿಸಲಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಬಾಲಿವುಡ್‌ನ ಇಬ್ಬರು ಅದ್ಭುತ ಡಾನ್ಸರ್‌ಗಳು ಒಟ್ಟಿಗೆ ನೃತ್ಯ ಮಾಡಲಿರುವುದು ಹಲವರಲ್ಲಿ ಖುಷಿ ನೀಡಿದೆ. ಈ ಹಾಡಿನ ಚಿತ್ರೀಕರಣಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿದೆ. ಬೇರೆ ಬೇರೆ ಸ್ಥಳಗಳಲ್ಲಿ ಶೂಟಿಂಗ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಇದು ಬಾಲಿವುಡ್‌ನ ಬಹುನಿರೀಕ್ಷಿತ ಗೀತೆ ಆಗಲಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಮೊದಲ ಬಾರಿಗೆ ಸ್ಟಾರ್‌ ನಟರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಈ ಸುದ್ದಿಗೆ ಸಂಬಂಧಿಸಿದ ಪೋಸ್ಟ್‌ಗಳಿಗೆ ಲೈಕ್‌ಗಳ ಸುರಿಮಳೆ ಸಿಕ್ಕಿದೆ. ‌

ಪ್ರತಿ ದಿನ ಹೊಸ ಸ್ಟಂಟ್‌ಗಳನ್ನು ಕಲಿಯುತ್ತಿರುವ ಟೈಗರ್‌ ಕೂಡ ಹೃತಿಕ್ ಜೊತೆಗೆ ಡಾನ್ಸ್‌ ಮಾಡಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ‘ಭಾಗಿ 3’ ಸಿನಿಮಾದ ಶೂಟಿಂಗ್ ಮುಗಿಸುವ ಧಾವಂತ ಕೂಡ ಇದೆ. ಮುಂದಿನ ವರ್ಷ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದೂ ಅವರು ಹೇಳಿದ್ದಾರೆ.

ಅಹಮ್ಮದ್ ಖಾನ್‌ ಅವರು ‘ಭಾಗಿ 3’ಗೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಈ ಸರಣಿಯ ಮೊದಲ ಸಿನಿಮಾ ‘ಭಾಗಿ’ ಯಲ್ಲಿ ನಟಿಸಿದ್ದ ಶ್ರದ್ಧಾ ಕಪೂರ್ ಅವರೇ ಈ ಸಿನಿಮಾದ ನಾಯಕಿ ಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು