ಇದು ‘ಒಜಿಎಫ್‌’

ಭಾನುವಾರ, ಏಪ್ರಿಲ್ 21, 2019
32 °C

ಇದು ‘ಒಜಿಎಫ್‌’

Published:
Updated:
Prajavani

ಒಜಿಎಫ್‌... ಇದು ತಮಿಳು ಸಿನಿಮಾ ಶೀರ್ಷಿಕೆಯೊಂದರ ಹ್ರಸ್ವರೂಪ. ‘ಆಪರೇಷನ್‌ ಗೋಲ್ಡ್‌ ಫಿಶ್‌’ ಎಂಬುದು ಸಿನಿಮಾದ ಪೂರ್ತಿಹೆಸರು. ಸಾಯಿಕಿರಣ್‌ ಅಡಿವಿ ನಿರ್ದೇಶನದ ಒಜಿಎಫ್‌ನ ಫಸ್ಟ್‌ ಲುಕ್‌ ಮೊನ್ನೆ ತಾನೇ ಬಿಡುಗಡೆಯಾಗಿದೆ. ನಾಯಕನಟ ಮತ್ತು ಪೋಷಕ ನಟನಾಗಿ ಮಿಂಚಿದ ಮನೋಜ್‌ ನಂದಮ್‌ ಮೊದಲ ಬಾರಿಗೆ ಖಳಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಈ ಚಿತ್ರದ ಹೈಲೈಟ್‌ಗಳಲ್ಲೊಂದು. 

ಈ ಹಿಂದೆ ಮಹೇಶ್‌ಬಾಬು ಮತ್ತು ಪ್ರಭಾಸ್‌ ಅವರ ಕಿರಿವಯಸ್ಸಿನ ಪಾತ್ರಗಳಿಗೆ ಜೀವ ತುಂಬಿ ಕಾಲಿವುಡ್‌ನ ಗಮನ ಸೆಳೆದವರು ಮನೋಜ್‌. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದಾಗಲೇ ನಟನಾ ಕೌಶಲವನ್ನು ಸಾಬೀತು‍ಪಡಿಸಿದವರು. ನಾಯಕನಟನಾಗಿ ಅಭಿನಯಿಸಿದ್ದ ‘ಒಕ ರೊಮ್ಯಾಂಟಿಕ್‌ ಕ್ರೈಮ್‌ ಕಥಾ’ ಬಳಿಕ ಮನೋಜ್‌ಗೆ ಹೊಸ ಅವಕಾಶಗಳು ಹುಡುಕಿಬಂದಿದ್ದವು. ಅಂತಹವುಗಳಲ್ಲಿ ‘ಒಜಿಎಫ್’ ಒಂದು.

ಏರ್‌ಟೆಲ್‌ ಜಾಹೀರಾತಿನ ಮೂಲಕ ಮನೆಮಾತಾಗಿರುವ ಸಾಶಾ ‘ಒಜಿಎಫ್‌’ ನಾಯಕನಟಿ. ಕಟ್ಟಾ ಆಶಿಶ್‌ ರೆಡ್ಡಿ, ಕೇಶವ ಉಮಾ ಸ್ವರೂಪ್‌, ಪದ್ಮನಾಭ ರೆಡ್ಡಿ, ಗ್ಯಾರಿ, ಸತೀಶ್ ಡೇಗಲ ಇತರ ಪಾತ್ರಗಳಿಗೆ ಆಯ್ಕೆಯಾಗಿದ್ದಾರೆ. ದಾಮೋದರ್‌ ಯಾದವ್‌ ಮತ್ತು ಕಿರಣ್ ್ರೆಡ್ಡು ತುಮ್ಮಾ ‘ಒಜಿಎಫ್‌’ಗೆ ಬಂಡವಾಳ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !