ಭಾನುವಾರ, ಫೆಬ್ರವರಿ 28, 2021
31 °C

‘ಲೈಗರ್’ ಆಗಲಿದ್ದಾರೆ ವಿಜಯ್ ದೇವರಕೊಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಲಿವುಡ್ ನಟ ವಿಜಯ್ ದೇವರಕೊಂಡ ಹುಲಿ ಸಿಂಹದ ಎರಡೂ ಅವತಾರವನ್ನು ಎತ್ತಿದ್ದಾರೆ. ಅಂದರೆ, ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಲೈಗರ್ ಎಂದು ಶೀರ್ಷಿಕೆ ಇಡಲಾಗಿದೆ. ಅದರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಲಯನ್‌ ಮತ್ತು ಟೈಗರ್‌ ಶಬ್ದಗಳನ್ನು ಜೋಡಿಸಿ ಲೈಗರ್‌ ಶೀರ್ಷಿಕೆ ಇಡಲಾಗಿದೆ. ಹುಲಿ– ಸಿಂಹದ ಸಂಕರ ತಳಿ ಎಂಬ ಅರ್ಥ ಕೊಡುತ್ತದೆ. ಟ್ಯಾಗ್‌ಲೈನ್‌ನಲ್ಲೂ ಅದನ್ನೇ ಹೇಳಲಾಗಿದೆ. ‘ಸಾಲಾ ಕ್ರಾಸ್‌ ಬ್ರೀಡ್‌’

ಪ್ಯಾನ್ ಇಂಡಿಯಾ ಪರಿಕಲ್ಪನೆಯ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಟ ವಿಜಯ್ ದೇವರಕೊಂಡ ಬಹುಬೇಡಿಕೆಯ ನಟ. ಇದೀಗ ಇವರ ಜತೆಗೆ ‘ಇಸ್ಮಾರ್ಟ್ ಶಂಕರ್’ ಸಿನಿಮಾ ಯಶಸ್ಸಿನ ಗುಂಗಲ್ಲಿರುವ ಅವರಿಗೆ ಪುರಿ ಜಗನ್ನಾಥ್ ಕೈ ಜೋಡಿಸಿದ್ದಾರೆ.ಇದೊಂದು ಆ್ಯಕ್ಷನ್‌ ಸಿನಿಮಾ. ಇಲ್ಲಿ ದೇವರಕೊಂಡ ಅವರದ್ದು ಬಾಕ್ಸರ್‌ ಪಾತ್ರ.

ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ರಮ್ಯಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿದ್ದಾರೆ. ರೋನಿತ್ ರಾಯ್, ವಿಶು ರೆಡ್ಡಿ, ಆಲಿ, ಮಕರಂದ್ ದೇಶಪಾಂಡೆ, ಗೆಟಪ್ ಶ್ರೀನು ನಟಿಸಿದ್ದಾರೆ. ಒಂದಷ್ಟು ಭಾಗದ ಶೂಟಿಂಗ್ ಕೆಲಸವೂ ಮುಕ್ತಾಯವಾಗಿದೆ. ಈ ಬಹುನಿರೀಕ್ಷಿತ ಸಿನಿಮಾಕ್ಕೆ ವಿಷ್ಣು ಶರ್ಮಾ ಛಾಯಾಗ್ರಹಣ ಮಾಡಿದ್ದಾರೆ. ಜಾನಿ ಶೇಖ್ ಬಾಷಾ ಕಲಾ ನಿರ್ದೇಶನ ಇರುವ ಈ ಚಿತ್ರಕ್ಕೆ ಜುನೈದ್ ಸಿದ್ಧಿಕಿ ಸಂಕಲನ ಮಾಡುತ್ತಿದ್ದಾರೆ.

ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಜಂಟಿಯಾಗಿ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ.


‘ಲೈಗರ್’ ಚಿತ್ರದ ಪೋಸ್ಟರ್‌

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು