ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಪ್ರಭಾಸ್ ಈಗ‌ ‘ಜಗದೇಕ ವೀರುಡು’

Last Updated 12 ಮೇ 2020, 12:06 IST
ಅಕ್ಷರ ಗಾತ್ರ

‘ಬಾಹುಬಲಿ’ ನಂತರ ನಟ ಪ್ರಭಾಸ್‌ ಅಭಿನಯದ ಸಿನಿಮಾಗಳ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿಯೇ ಇರುತ್ತದೆ. ನಾಗ್‌ ಅಶ್ವಿನ್‌ ನಿರ್ದೇಶನದ ಚಿತ್ರದಲ್ಲಿ ತಾವು ನಟಿಸುತ್ತಿರುವುದಾಗಿ ಪ್ರಭಾಸ್‌ ಘೋಷಿಸಿದ್ದಾರೆ. ಇದು ಪ್ರಭಾಸ್ ಅಭಿನಯದ 21ನೇ ಚಿತ್ರ. ಸೈ–ಫೈ ಥ್ರಿಲ್ಲರ್ ಸಿನಿಮಾ ಇದು.

ಈ ಚಿತ್ರವು 1990ರಲ್ಲಿ ಬಿಡುಗಡೆಯಾಗಿರುವ ಮೆಗಾಸ್ಟಾರ್‌ ಚಿರಂಜೀವಿ ಹಾಗೂ ಶ್ರೀದೇವಿ ಅಭಿನಯದ, ಬ್ಲಾಕ್‌ ಬಸ್ಟರ್‌ ಹಿಟ್‌ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾದ ಸೀಕ್ವೆಲ್ (ಮುಂದುವರಿದ ಭಾಗ)‌ ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

‘ಜಗದೇಕ ವೀರುಡು ಅತಿಲೋಕ ಸುಂದರಿ’ ಚಿತ್ರ ಬಿಡುಗಡೆಯಾಗಿ ಮೂವತ್ತು ವರ್ಷಗಳಾಗಿವೆ. ಈ ಸೀಕ್ವೆಲ್‌ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಅಶ್ವಿನಿ ದತ್ತ ಅವರು, ಈ ಹಿಂದೆ ಅನೇಕ ಸಂದರ್ಶನಗಳಲ್ಲಿ ‘ಜಗದೇಕ ವೀರುಡು...’ ಸಿನಿಮಾದ ಸೀಕ್ವೆಲ್‌ ಮಾಡುವುದಾಗಿಯೂ ಆ ಚಿತ್ರದ ಕೆಲಸಗಳು ಆರಂಭವಾಗಿರುವುದಾಗಿಯೂ ಹೇಳಿದ್ದರು. ಈಗ ಅವರೇ ‘ನಾಗ್‌ ಅಶ್ವಿನ್‌ ಮುಂದಿನ ಚಿತ್ರ, ಆ ಸಿನಿಮಾದ ಸೀಕ್ವೆಲ್‌’ ಎಂದು ಸ್ಪಷ್ಟಪಡಿಸಿದ್ದಾರೆ.

ನಾಗ್‌ ಅಶ್ವಿನ್‌ ಅವರು ಮೊದಲು ಈ ಚಿತ್ರದ ಕತೆಯನ್ನು ಚಿರಂಜೀವಿ ಅವರಿಗೇ ವಿವರಿಸಿದ್ದರು. ಆದರೆ ಕೆಲ ಕಾರಣಗಳಿಂದ ಅವರು ಈ ಚಿತ್ರವನ್ನು ಒಪ್ಪಿಕೊಂಡಿಲ್ಲ. ಬಳಿಕ ನಿರ್ದೇಶಕರು ಪ್ರಭಾಸ್ ಅವರಿಗೆ‌ ಅದೇ ಕತೆಯನ್ನು ವಿವರಿಸಿದ್ದು, ಚಿತ್ರಕತೆಯನ್ನು ಒಪ್ಪಿಕೊಂಡ ಅವರು ನಟಿಸಲು ಒಪ್ಪಿಕೊಂಡಿದ್ದಾರೆ.ವೈಜಯಂತಿ ಮೂವಿ ಬ್ಯಾನರ್‌ನಡಿಯಲ್ಲಿ ₹300 ಕೋಟಿ ಬಂಡವಾಳದಲ್ಲಿ ಈ ಸಿನಿಮಾ ತಯಾರಾಗಲಿದೆ. ಈ ಸೀಕ್ವೆಲ್‌ ಸಿನಿಮಾದ ಕತೆ ಬಗ್ಗೆ ಅವರು ಯಾವುದೇ ಕ್ಲೂ ಬಿಟ್ಟುಕೊಟ್ಟಿಲ್ಲ.

ಕೆಲ ತಿಂಗಳುಗಳ ಹಿಂದೆಯೇ ನಿರ್ದೇಶಕ ನಾಗ್‌ ಅಶ್ವಿನ್‌, ಅಶ್ವಿನಿ ದತ್ತ ಹಾಗೂ ಪ್ರಭಾಸ್‌ ಜೊತೆ ಹೊಸ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು.

‘ಜಗದೇಕ ವೀರುಡು ಅತಿಲೋಕ ಸುಂದರಿ’ ಚಿತ್ರವನ್ನು ನಿರ್ದೇಶಿಸಿದವರು ಕೆ.ರಾಘವೇಂದ್ರ ರಾವ್‌. ಸೂಪರ್‌ನ್ಯಾಚುರಲ್‌ ಫ್ಯಾಂಟಸಿ ಕತೆಯನ್ನೊಳಗೊಂಡ ಈ ಚಿತ್ರ 1990ರ ಮೇ 9ರಂದು ಬಿಡುಗಡೆಯಾಗಿತ್ತು. ಆ ವರ್ಷದ ಅತಿ ಹೆಚ್ಚು ಹಿಟ್‌ ಆದ ಸಿನಿಮಾ ಅದೇ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT