ಶನಿವಾರ, ಜುಲೈ 31, 2021
25 °C
ಸಾಮಾನ್ಯರ ಅಸಾಮಾನ್ಯ ಪ್ರೇಮಕತೆ

ಸುಶಾಂತ್‌ ಕೊನೆ ಚಿತ್ರ ‘ದಿಲ್‌ ಬೇಚಾರ’ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಏಕ್‌ ಥಾ ರಾಜ, ಏಕ್‌ ಥಿ ರಾಣಿ. ದೋನೊ ಮರ್ ಗಯೆ, ಖತಂ ಕಹಾನಿ’ ಈ ದುರಂತ ಸೂಚಕ ವಾಕ್ಯಗಳಿಂದಲೇ ‘ದಿಲ್‌ ಬೇಚಾರ’ ಸಿನಿಮಾದ ಟ್ರೇಲರ್‌ ಆರಂಭವಾಗುತ್ತದೆ. ‘ಆದರೆ, ಅಂತಹ ದುರಂತ ಕತೆಗಳು ಯಾರಿಗೂ ಇಷ್ಟವಾಗುವುದಿಲ್ಲ’ ಎಂದು ಹೇಳುತ್ತಲೇ ಸಾವಿನಂಚಿನಲ್ಲಿರುವ ಇಬ್ಬರು ಪ್ರೇಮಿಗಳ ಪ್ರೀತಿಯನ್ನು ನವಿರಾಗಿ ಸಿನಿಮಾದಲ್ಲಿ ಚಿತ್ರಿಸಲಾಗಿದೆ ಎಂಬ ಸುಳಿವನ್ನು ‘ದಿಲ್‌ ಬೇಚಾರ’ ಸಿನಿಮಾದ ಟ್ರೇಲರ್‌ ನೀಡುತ್ತದೆ. 

ಈ ಟ್ರೇಲರ್‌ ಬಿಡುಗಡೆಯಾದ ಅರ್ಧ ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದು ಸುಶಾಂತ್‌ ಸಿಂಗ್‌ ಕೊನೆಯ ಮತ್ತು ಸಂಜನಾ ಸಾಂಘಿಯ ಮೊದಲ ಚಿತ್ರ ಎನ್ನುವುದು ‘ದಿಲ್‌ ಬೇಚಾರ’ ವಿಶೇಷತೆ.

ಈ  ಸಿನಿಮಾದಲ್ಲಿ ನಾಯಕನಾಗಿ ಸುಶಾಂತ್‌ ಸಿಂಗ್ ರಜಪೂತ್‌ ಮನ್ನಿಯಾಗಿ ಹಾಗೂ ಸಂಜನಾ ಸಾಂಘಿ ಕಿಜಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಾಮಾನ್ಯ ಜನರ ಅಸಾಮಾನ್ಯ ಪ್ರೇಮಕತೆ. ಹಲವಾರು ತಿರುವುಗಳಿಂದ ಕೂಡಿದ ಪ್ರೇಮಿಗಳಿಬ್ಬರ ಜೀವನದಲ್ಲಿ ನಡೆಯುವ ದುರಂತ ಪ್ರೇಮಕತೆಯನ್ನು ಹೇಳುವ 2.43 ನಿಮಿಷದ ಟ್ರೇಲರ್ ಮನವನ್ನು ತಟ್ಟುತ್ತದೆ. 

ಭಾನುವಾರ (ಜುಲೈ5) ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಸಾಂಘಿ, ‘ಮನ್ನಿ ಇಲ್ಲದೆ ಕಿಜಿ ಅಪೂರ್ಣ. ಇದು ನನ್ನ ಫೇವರಿಟ್‌ ದೃಶ್ಯ. ನಾಳೆ ಟ್ರೇಲರ್‌ ಬಿಡುಗಡೆಯಾಗುತ್ತದೆ. ಎಲ್ಲರೂ ನೋಡ್ತಿರಲ್ಲ?’ ಎಂದು ಭಾವನಾತ್ಮಕ ಸಂದೇಶ ಹಾಕಿದ್ದಾರೆ. 

‘ದಿಲ್‌ ಬೇಚಾರ’ ಸಿನಿಮಾವು ಹಾಲಿವುಡ್‌ನಲ್ಲಿ 2014ರಲ್ಲಿ ಬಿಡುಗಡೆಯಾದ ‘ದಿ ಫಾಲ್ಟ್‌ ಇನ್‌ ಅವರ್‌ ಸ್ಟಾರ್ಸ್‌’ ಚಿತ್ರದ ರಿಮೇಕ್‌. ಖ್ಯಾತ ಲೇಖಕ ಜಾನ್‌ ಗ್ರೀನ್‌ ಅವರ ಅತಿ ಹೆಚ್ಚು ಮಾರಾಟವಾದ ಕೃತಿಯನ್ನು ಆಧರಿಸಿೆ ಈ ಚಿತ್ರ ಅದೇ ಹೆಸರಿನಲ್ಲಿ ತೆರೆಗೆ ಬಂದಿತ್ತು.   

ಥೈರಾಯ್ಡ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಾಯಕಿ ಕಿಜಿ, ನಾಯಕ ರಾಜ್‌ಕುಮಾರ್ ನನ್ನು (ಮನ್ನಿ) ಭೇಟಿಯಾದ ನಂತರ ಅವಳ ಬದುಕು ತಿರುವು ತೆಗೆದುಕೊಳ್ಳುತ್ತದೆ. ‘ಜೀನಾ ಕೈಸೆ ಹೈ, ವೋ ತುಮ್‌ ಡಿಸೈಡ್‌ ಕರ್‌ ಸಖತೆ ಹೈ’ ಎನ್ನುತ್ತಾ ಇಬ್ಬರು ಹೆಚ್ಚು ಸಮಯವನ್ನು ಜೊತೆಯಾಗಿ ಕಳೆಯುವುದು, ಪ್ಯಾರಿಸ್‌ನಲ್ಲಿ ಕಿಜಿಯನ್ನು ಸಂತೋಷವಾಗಿಡಲು ಮನ್ನಿಯ ಪ್ರಯತ್ನಗಳು ಚಿತ್ರದ ಬಗ್ಗೆ ಕುತೂಹಲ ಕೆರಳಿಸುತ್ತವೆ.

ಸುಶಾಂತ್‌ ಸಿಂಗ್‌ ರಜಪೂತ್‌ ಹಾಗೂ ಸಂಜನಾ ಸಾಂಘಿ ಇಬ್ಬರು ಮುಗ್ಧ ಹಾಗೂ  ಮನೋಜ್ಞ ಅಭಿನಯದಿಂದ ಮನಸೆಳೆಯುತ್ತಾರೆ. ಹಿಂದಿಯಲ್ಲಿ ಈ ಚಿತ್ರವನ್ನು ಮುಕೇಶ್‌ ಛಬ್ಬರ್‌ ನಿರ್ದೇಶನ ಮಾಡಿದ್ದಾರೆ. ಎ.ಆರ್‌. ರೆಹಮಾನ್‌ ಸಂಗೀತ ನೀಡಿದ್ದಾರೆ. 

ಜುಲೈ 24ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಸುಶಾಂತ್‌ ಗೌರವಾರ್ಥವಾಗಿ ಎಲ್ಲರೂ ಉಚಿತವಾಗಿ ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. 

ಟ್ರೇಲರ್‌ ವೀಕ್ಷಿಸಲು ಈ ಲಿಂಕ್‌ ಒತ್ತಿ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು