ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಕೋನದಲ್ಲೊಂದು ತ್ರಿಭಾಷಾ ಸೂತ್ರ!

Last Updated 6 ಏಪ್ರಿಲ್ 2022, 9:42 IST
ಅಕ್ಷರ ಗಾತ್ರ

ಚಿತ್ರವನ್ನು ಪ್ರೇಕ್ಷಕ ಇಷ್ಟಪಡುತ್ತಾನೆ ಎಂಬ ನಂಬಿಕೆ. ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಕಂಟೆಂಟ್‌ ಕೊಟ್ಟಿದ್ದೇನೆ ಎಂಬ ತೃಪ್ತಿಗಾಗಿ ಈ ಚಿತ್ರ ಮಾಡುತ್ತಿದ್ದೇನೆ. ಮೂರು ಭಾಷೆಗಳಲ್ಲಿ ಈ ಚಿತ್ರವನ್ನು ಬೇರೆ ಬೇರೆ ರೀತಿಯೇ ಮೂಡಿಬರಲಿದೆ...

– ಹೀಗೆಂದು ‘ತ್ರಿಕೋನ’ ಚಿತ್ರದ ಕಥೆಗಾರ, ನಿರ್ಮಾಪಕ ರಾಜಶೇಖರ್‌ ಮಾತಿಗಿಳಿದರು.

‘ಏ. 8ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. ಹಿರಿಕಿರಿಯ ಕಲಾವಿದರು, ನಿರ್ದೇಶಕರು ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಹಿರಿಯ ಹಾಗೂ ಪೋಷಕ ನಟರನ್ನೇ ಬಳಸಿಕೊಂಡು ನಿರ್ಮಿಸಿರುವ ಚಿತ್ರವಿದು.

‘ಅಭಿಪ್ರಾಯಬೇಧಗಳೇ ಹೊಸದೊಂದರ ಹುಟ್ಟಿಗೆ ಕಾರಣವಾಗುತ್ತದೆ. ಹಾಗಾಗಿ ನಿರ್ದೇಶಕ ಚಂದ್ರಕಾಂತ್ ಅವರು ನನ್ನ ಕಲ್ಪನೆಯನ್ನು ಅದ್ಭುತವಾಗಿ ಸಾಕಾರಗೊಳಿಸಿದ್ದಾರೆ. ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ನನಗೊಂದಿಷ್ಟು ಆಲೋಚನೆಗಳು ಹೊಳೆದವು. ಹಾಗಾಗಿ ನಾನೂ ಒಂದು ಪ್ರತ್ಯೇಕ ಸಂಕಲನ ಮಾಡಿಟ್ಟುಕೊಂಡೆ. ಮೊದಲು ಕನ್ನಡ ಚಿತ್ರ ಬಿಡುಗಡೆಯಾಗಲಿ. ಅದರ ಪ್ರತಿಕ್ರಿಯೆ ನೋಡಿಕೊಂಡು ನಾನು ಮಾಡಿದ ಸಂಕಲನದ ಪ್ರತಿಯನ್ನು ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದರು ರಾಜಶೇಖರ್‌.

‘ಕನ್ನಡದ ಸ್ವರೂಪ, ತಾಂತ್ರಿಕ ತಂಡವೇ ಬೇರೆ, ತಮಿಳು ತೆಲುಗು ಆವೃತ್ತಿಯ ತಾಂತ್ರಿಕ ತಂಡ, ಸಂಗೀತ ಬೇರೆಯೇ. ಕಂಟೆಂಟ್‌ ಕೂಡಾ ಬದಲಾಗುತ್ತದೆ. ಈ ಪ್ರಯೋಗವನ್ನು ಬಹುಶಃ ನಮ್ಮಲ್ಲಿ ಯಾರೂ ಮಾಡಿರಲಿಕ್ಕಿಲ್ಲ. ಒಂದಿಷ್ಟು ಭರವಸೆ ಇದೆ. ತಮಿಳು, ತೆಲುಗು ಭಾಗಗಳು ಏನಿದ್ದರೂ ಪ್ರಾಯೋಗಿಕ ಪ್ರಯತ್ನ’ ಎಂದರು ಅವರು.

‘ನಾನೂ ನಿರ್ದೇಶಕನಾದ ಕಾರಣ ನಿರ್ಮಾಣಪೂರ್ವ ಮತ್ತು ನಿರ್ಮಾಣೋತ್ತರ ಕೆಲಸದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದೇನೆ. ಇನ್ನಷ್ಟು ಚಿತ್ರ ನಿರ್ಮಿಸುವ ಕನಸೂ ಇದೆ’ ಎಂದರು.

ಸುರೇಶ್ ಹೆಬ್ಳಿಕರ್, ಲಕ್ಷ್ಮೀ, ಅಚ್ಯುತ್ ಕುಮಾರ್, ಸುಧಾರಾಣಿ, ಸಾಧು ಕೋಕಿಲಾ, ಮಾರುತೇಶ್, ರಾಜ್‌ವೀರ್, ಬೇಬಿ ಅದಿತ್ಯ, ಹಾಸಿನಿ, ಮನದೀಪ್ ರಾಯ್, ರಾಕ್‌ಲೈನ್ ಸುಧಾಕರ್ ಚಿತ್ರದ ತಾರಾಗಣದಲ್ಲಿದ್ದಾರೆ. ಸುಚೇಂದ್ರ ಪ್ರಸಾದ್‌ ಈ ಚಿತ್ರದ ಪ್ರಚಾರ ರಾಯಭಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT