ಸೋಮವಾರ, ಸೆಪ್ಟೆಂಬರ್ 23, 2019
28 °C

ಮೋಹನ್‌ಲಾಲ್‌ ಜೊತೆ ತ್ರಿಷಾ ನಟನೆ

Published:
Updated:
Prajavani

ಮಲಯಾಳಂ ಸಿನಿಮಾ ನಿರ್ದೇಶಕ ಜೀತು ಜೋಸೆಫ್‌ ಹಾಗೂ ನಟ ಮೋಹನ್‌ಲಾಲ್‌ ಎರಡನೇ ಬಾರಿಗೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಜೋಸೆಫ್‌ ನಿರ್ದೇಶನದ  ಇನ್ನೂ ಹೆಸರಿಡದ ಆ್ಯಕ್ಷನ್‌ ಚಿತ್ರದ ನಾಯಕನಾಗಿ ಮೋಹನ್‌ಲಾಲ್‌ ನಟಿಸುತ್ತಿದ್ದಾರೆ. 

ಈ ಹಿಂದೆ ಜೀತು ಜೋಸೆಫ್‌ ಹಾಗೂ ಮೋಹನ್‌ಲಾಲ್‌ ‘ದೃಶ್ಯಂ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರಕ್ಕೆ ಎಲ್ಲಾ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತಲ್ಲದೇ, ಹಿಂದಿ, ತಮಿಳು, ಕನ್ನಡಕ್ಕೆ ರಿಮೇಕ್‌ ಆಗಿತ್ತು. ಮೂಲ ಚಿತ್ರದಷ್ಟೇ ರಿಮೇಕ್‌ ಚಿತ್ರಗಳೂ ಹಿಟ್‌ ಗಳಿಸಿದ್ದವು. ಈಗ ಎರಡನೇ ಬಾರಿ ಈ ಜೋಡಿ ಒಟ್ಟಿಗೆ ಕೆಲಸ ಮಾಡುತ್ತಿದೆ. ಇದು ಕೂಡ ಆ್ಯಕ್ಷನ್‌ ಚಿತ್ರ ಎಂಬುದು ವಿಶೇಷ. ಈ ಚಿತ್ರದಲ್ಲಿ ಮೋಹನ್‌ಲಾಲ್‌ಗೆ ಜೋಡಿಯಾಗಿ ತಮಿಳು ನಟಿ ತ್ರಿಷಾ ಕೃಷ್ಣನ್‌ ನಟಿಸುತ್ತಿದ್ದಾರೆ. 

ಈ ಚಿತ್ರದ ಚಿತ್ರೀಕರಣವು ಈಜಿಪ್ಟ್‌, ಕೆನಡಾದಲ್ಲಿ ನಡೆಯಲಿದೆ. 

ನಟಿ ತ್ರಿಷಾ ಮಾಲಿವುಡ್‌ಗೆ ನಟ ನವೀನ್‌ ಪೌಲಿಯ ‘ಹೇ ಜೂಡೆ’ ಚಿತ್ರದ ಮೂಲಕ ಕಾಲಿಟ್ಟಿದ್ದರು. ಮಲಯಾಳಂನಲ್ಲಿ ಇದು ಅವರ ಎರಡನೇ ಚಿತ್ರ. 

ಮೊದಲು ಈ ಚಿತ್ರ ತಮಿಳು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಮಲಯಾಳಂ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತದೆ ಎಂದು ಜೋಸೆಫ್‌ ಸ್ಪಷ್ಟನೆ ನೀಡಿದ್ದಾರೆ. 

Post Comments (+)