ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ದಿನ ಪೂರೈಸಿದ ‘ಗಮ್ಜಾಲ್‌’ ತುಳು ಸಿನಿಮಾ

Last Updated 16 ಮಾರ್ಚ್ 2021, 3:11 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌-19 ತಲ್ಲಣದ ನಂತರ ಬಿಡುಗಡೆಯಾದ ಮೊದಲ ತುಳು ಚಿತ್ರ ‘ಗಮ್ಜಾಲ್‌’ ಕರಾವಳಿಯ ಚಿತ್ರ ಮಂದಿರಗಳಲ್ಲಿ 25 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದೆ.

‘ಗಿರಿಗಿಟ್‌’ ಖ್ಯಾತಿಯ ರೂಪೇಶ್‌ ಶೆಟ್ಟಿ ತಂಡದ ಈ ಸಿನಿಮಾ ಫೆ. 19ರಂದು ದಕ್ಷಿಣ ಕನ್ನಡ ಮತ್ತು ಉಡುಪಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನಂತರ ಬೆಂಗಳೂರು, ಮೈಸೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಮಂಗಳೂರಿನ ಮಲ್ಟಿಫೆಕ್ಸ್‌ನಲ್ಲಿ ಮತ್ತು ಉಡುಪಿಯ ಚಿತ್ರಮಂದಿರಗಳಲ್ಲಿ ಈ ಸಿನಿಮಾವು 25 ದಿನಗಳ ಪ್ರದರ್ಶನವನ್ನು ಪೂರೈಸಿದೆ.

‘ಲಾಕ್‌ಡೌನ್‌ನಲ್ಲಿ ಮಾಡಿದ ಒಂದು ಸಣ್ಣ ಹೊಸತನದ ಪ್ರಯತ್ನ ‘ಗಮ್ಜಾಲ್’ ಚಿತ್ರ. ಸ್ತಬ್ದವಾಗಿದ್ದ ತುಳು ಚಿತ್ರರಂಗ ಮತ್ತೆ ಪುಟಿದೇಳಬೇಕೆಂಬ ಪ್ರಾಮಾಣಿಕ ವಾದ ಉದ್ದೇಶದಿಂದ ಕೋವಿಡ್‌ ಸಮಯದಲ್ಲೂ ಚಿತ್ರ ಬಿಡುಗಡೆ ಮಾಡಿದೆವು. ಪ್ರೇಕ್ಷಕರು ಅದ್ಭುತ ರೀತಿಯಲ್ಲಿ ಗೆಲ್ಲಿಸಿಕೊಟ್ಟು, ಅವರ ಪ್ರೀತಿಗೆ ಅಭಾರಿಯಾಗಿದ್ದೇನೆ’ ಎಂದು ರೂಪೇಶ್‌ ಶೆಟ್ಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT