ಶುಕ್ರವಾರ, ಏಪ್ರಿಲ್ 10, 2020
19 °C

‘ಮಾಯಾ ಕನ್ನಡಿ’ಯಲ್ಲಿ ತುಳುನಾಡ ಚೆಲುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಳುನಾಡು ಮೂಲದ ಮುಂಬೈ ಬೆಡಗಿ ಕಾಜಲ್‌ ಕುಂದರ್ ಮತ್ತು ಪ್ರಭು ಮುಂಡ್ಕೂರ್‌ ನಟಿಸಿರುವ ‘ಮಾಯಾ ಕನ್ನಡಿ’ ಇದೇ ಶುಕ್ರವಾರ (ಫೆ.29) ತೆರೆಕಾಣಲಿದೆ.

ಹಿಂದಿ, ಮರಾಠಿ ಹಾಗೂ ತುಳು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಬಹುಭಾಷಾ ನಟಿ ಕಾಜಲ್‌ ಕುಂದರ್‌ ‘ಮಾಯಾ ಕನ್ನಡಿ’ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡಲಿದ್ದಾರೆ. ಮಾದಕ ಕಣ್ಗಳ ಈ ಚೆಲುವೆ ನಟಿಸಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಗಳ ಲವ್‌ ಸ್ಟೋರಿ, ಸೆಂಟಿಮೆಂಟ್‌, ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಕೂಡ ಇದೆ. ಚಂದನವನದಲ್ಲಿ ಹಲವು ಅವಕಾಶಗಳನ್ನು ಈ ಮಾಯಾ ಕನ್ನಡಿ ತಂದುಕೊಡಲಿದೆ ಎನ್ನುವುದು ಅವರ ಭರವಸೆಯ ನುಡಿ.

ಕನ್ನಡದ ‘ಹರಹರ ಮಹಾದೇವ’ ಧಾರಾವಾಹಿಯ ‘ಅದಿತಿ’ ಪಾತ್ರದಲ್ಲಿ ಕಿರುತೆರೆ ವೀಕ್ಷಕರಿಗೆ ಪರಿಚಿತರಾಗಿರುವ ಕಾಜಲ್‌, ತುಳು ಚಿತ್ರ ‘ದೇಯೀಬೈದೆತಿ’ಯಲ್ಲಿ ಎರಡು ಶೇಡ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತುಳು ಕಾಮಿಡಿ ಸಿನಿಮಾ ‘ಮಾಜಿ ಮುಖ್ಯಮಂತ್ರಿ’ಯಲ್ಲೂ ಕಾಜಲ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ಮಾಯಾ ಕನ್ನಡಿ’ಗೆ ವಿನೋದ್ ಪೂಜಾರಿ ಕಥೆ ಹೆಣೆಯುವ ಜತೆಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳ ಹಕ್ಕನ್ನು ಆನಂದ್‌ ಆಡಿಯೊ ಸಂಸ್ಥೆ ಖರೀದಿಸಿದ್ದು, ಈ ಹಾಡುಗಳು ಈಗಾಗಲೇ ಚಿತ್ರರಸಿಕರ ಗಮನ ಸೆಳೆದಿವೆ.

ಸಿಫೋರಿಯಾ ಪಿಕ್ಚರ್ಸ್‌ ಲಾಂಛನದಲ್ಲಿ ಸಪ್ನಾ ಪಾಟೀಲ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಣಿ ಕೂಕಲ್ ನಾಯರ್ ಛಾಯಾಗ್ರಹಣ, ಅಭಿಷೇಕ್ ಎಸ್.ಎನ್. ಸಂಗೀತ, ಆನಂದ್ ರಾಜವಿಕ್ರಂ ಹಿನ್ನೆಲೆ ಸಂಗೀತ ಹಾಗೂ ಸುಜೀತ್ ನಾಯಕ್ ಅವರ ಸಂಕಲನ ಈ ಚಿತ್ರಕ್ಕಿದೆ. ಕೆ.ಎಸ್.ಶ್ರೀಧರ್, ಅನ್ವಿತಾ ಸಾಗರ್, ಅನೂಪ್ ಸಾಗರ್, ಅಶ್ವಿನಿರಾವ್ ಪಲ್ಲಕ್ಕಿ, ಕಾರ್ತಿಕ್ ರಾವ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)