ಗುರುವಾರ , ಜನವರಿ 28, 2021
16 °C

ನಾಯಕನಾಗಿ ಚಂದನವನಕ್ಕೆ ಕಾಲಿಡಲಿರುವ ಅಭಿ ಅಲಿಯಾಸ್ ವಿಕ್ರಾಂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿಷೇಕ್ ದಾಸ್‌ (ಚಿತ್ರ: ಅಭಿ ಅವರ ಇನ್ಸ್‌ಸ್ಟಾಗ್ರಾಂ ಖಾತೆಯಿಂದ)

ಕಿರುತೆರೆ ನಟ, ಗಟ್ಟಿಮೇಳ ಧಾರಾವಾಹಿಯ ವಿಕ್ರಾಂತ್ ಪಾತ್ರಧಾರಿ ಅಭಿಷೇಕ್‌ ರಾಮ್‌ದಾಸ್‌ ಚಂದನವನದಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ‘ಅಂಬಿ ನಿಂಗ್ ವಯಸ್ಸಾಯ್ತೊ’ ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದ್ದ ಈ ನಟ ಈಗ ‘14 ಫೆ.’ ಸಿನಿಮಾದ ಮೂಲಕ ನಾಯಕನಾಗುತ್ತಿದ್ದಾರೆ. ಈ ಚಿತ್ರಕ್ಕೆ ಪ್ರದೀಪ್ ಕುಮಾರ್ ನಿರ್ದೇಶನವಿದೆ. ‌ಶ್ರೀ ಪೂರ್ವಿಶ ಪ್ರೊಡಕ್ಷನ್ ಸಂಸ್ಥೆಯಡಿ ಸಿನಿಮಾ ನಿರ್ಮಾಣವಾಗುತ್ತಿದೆ.

ಚಿತ್ರದ ಬಗ್ಗೆ ಮಾತನಾಡಿರುವ ಅಭಿ ‘ನಾಯಕನಾಗಿ ನಟಿಸುತ್ತಿರುವ ಬಗ್ಗೆ ಖುಷಿ ಇದೆ. ಎಲ್ಲಾ ವಿವಾದಗಳ ನಂತರ ನಾನು ನಾಯಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದೇನೆ. ಸಿನಿಮಾದಲ್ಲಿ ಕೃಷ್ಣಮೂರ್ತಿ ಎಂಬ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಈ ಸಿನಿಮಾವೂ ಹದಿಹರೆಯದವರ ಪ್ರೇಮ, ಬ್ರೇಕ್‌ಅಪ್‌ಗೆ ಕಾರಣಗಳನ್ನು ವಿಷಯವಾಗಿಸಿಕೊಂಡಿದೆ. ಜೊತೆಗೆ ಸಿನಿಮಾದಿಂದ ಪೋಷಕರು ಹಾಗೂ ಯುವಜನತೆಗೆ ಒಳ್ಳೆಯ ಸಂದೇಶವಿದೆ. ಈ ಚಿತ್ರದಲ್ಲಿ ನಾಲ್ಕು ಜನ ನಾಯಕಿಯರು’ ಎಂದು ಆಂಗ್ಲ ಮಾಧ್ಯಮವೊಂದರ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಡಾನ್ಸರ್ ಆಗಿ ಕಿರುತೆರೆ ಪ್ರವೇಶಿಸಿದ್ದ ಅಭಿ ‘ಗಟ್ಟಿಮೇಳ’ದ ವಿಕ್ರಾಂತ್ ಪಾತ್ರದ ಮೂಲಕ ಹೆಚ್ಚು ಪರಿಚಿತರಾಗಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಷೋದಲ್ಲೂ ಇವರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು