ಶುಕ್ರವಾರ, ನವೆಂಬರ್ 15, 2019
27 °C

ಸೆ.19ರಿಂದ ಅರ್ಬನ್‌ ಲೆನ್ಸ್‌ ಸಿನಿಮೋತ್ಸವ

Published:
Updated:

ಬೆಂಗಳೂರು: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹ್ಯೂಮನ್‌ ಸೆಟ್ಲ್‌ಮೆಂಟ್ಸ್‌(ಐಐಎಚ್‌ಎಸ್‌) ನಗರದಲ್ಲಿ ‘ಅರ್ಬನ್‌ ಲೆನ್ಸ್‌ ಸಿನಿಮೋತ್ಸವ‘ ಆಯೋಜಿಸಿದೆ.

ಸೆ.19ರಿಂದ 22ರವರೆಗೆ ಸಿನಿಮೋತ್ಸವ ನಡೆಯಲಿದೆ. ಗೋಥೆ ಇನ್‌ಸ್ಟಿಟ್ಯೂಟ್‌, ಮ್ಯಾಕ್ಸ್‌ ಮುಲ್ಲರ್‌ ಭವನ ಹಾಗೂ ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ ಸಹಯೋಗದಲ್ಲಿ ಈ ಸಿನಿಮೋತ್ಸ ಆಯೋಜಿಸಲಾಗಿದೆ. 

ನಗರವಾಸಿಗಳ ಜೀವನ, ಸಮಸ್ಯೆಗಳ ಕಥಾ ಹಂದರವುಳ್ಳ ಸಿನಿಮಾಗಳು ಈ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಲಲಿತ್‌ ವಚನಿ ಅವರ ‘ರಿಕಾಸ್ಟಿಂಗ್‌ ಸೆಲ್ವ್ಸ್‌’ ಸಿನಿಮಾ ಪ್ರದರ್ಶನದೊಂದಿಗೆ ಸಿನಿಮೋತ್ಸವ ಆರಂಭವಾಗಲಿದೆ. ಅನಾಮಿಕಾ ಹಕ್ಸರ್‌ ಅವರ ‘ಘೋಡೆ ಕೋ ಜಲೇಬಿ ಖಿಲಾನೆ ಲೇಜಾ ರಯೀ ಹ್ಞೂಂ’ (ಕುದುರೆಗೆ ಜಿಲೇಬಿ ತಿನ್ನಿಸಲು ಕರೆದೊಯ್ಯುತ್ತಿದ್ದೇನೆ), ಅಗ್ನೆಸ್‌ ವರ್ದ ಅವರ ‘ಜಾಕ್ವೆತ್‌ ದೆ ನಂಟೆಸ್‌' ಸಿನಿಮಾಗಳ ವಿಶೇಷ ಪ್ರದರ್ಶನವಿದೆ. 

ಅಂಜಲಿ ಮೊಂಟೆರಿಯೊ, ಕೆ.ಪಿ ಜಯಶಂಕರ್‌, ರೀನಾ ಮೋಹನ್‌, ಸುರಭಿ ಶರ್ಮಾ ಅವರ ಸಿನಿಮಾಗಳು ಇಲ್ಲಿ ಪ್ರದರ್ಶನವಾಗಲಿದ್ದು, ಸಿನಿಮಾ ಮುಗಿದ ಬಳಿಕ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಇದಲ್ಲದೇ ಸಿನಿಮಾ ಕಾರ್ಯಾಗಾರ, ದುಂಡು ಮೇಜಿನ ಚರ್ಚೆ ಹಾಗೂ ಕಲಾಕೃತಿ ಪ್ರದರ್ಶನ ಇರಲಿದೆ. 

ಸೆ.19ರಂದು ಗೋಥೆ ಇನ್‌ಸ್ಟಿಟ್ಯೂಟ್‌ ಹಾಗೂ ಮ್ಯಾಕ್ಸ್‌ ಮುಲ್ಲರ್‌ ಭವನದಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ. ಸೆ.20ರಂದು ಐಐಎಚ್‌ಎಸ್‌ ಬೆಂಗಳೂರು ಸಿಟಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ನೋಂದಣಿಗೆ ಇಲ್ಲಿ ಕ್ಲಿಕ್ಕಿಸಿ:  https://bit.ly/2GrHkFg

ಪ್ರತಿಕ್ರಿಯಿಸಿ (+)