ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮುಂದೂಡಿಕೆಯಾಗಿ ಜೂನ್ 4ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ವರುಣ್ ಧವನ್, ಪೂಜಾ ಹೆಗ್ಡೆ ಹಾಗೂ ಮೃಣಾಲ್ ಠಾಕೂರ್ ನಟನೆಯ ‘ಹೇ ಜವಾನಿ ತೊ ಇಷ್ಕ್ ಹೋನಾ ಹೇ’ ಸಿನಿಮಾವನ್ನು ಚಿತ್ರತಂಡ ಮುಂದೂಡಿದೆ.

ಈ ಸಿನಿಮಾ ಜೂನ್ 5ರಂದು ತೆರೆಕಾಣಬೇಕಿತ್ತು. ಇದೀಗ ಜೂನ್ 12ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

‘ಹಲವು ತಿಂಗಳುಗಳ ಹಿಂದೆಯೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದೆವು. ಇತ್ತೀಚಿಗಿನ ಕೆಲವು ಬದಲಾವಣೆಗಳ ಕಾರಣ ಸಿನಿಮಾವನ್ನು ಮುಂದೂಡುವುದು ಸೂಕ್ತ ಎಂದು ಭಾವಿಸಿದ್ದೇವೆ. ಸಿನಿಮಾ ನಿರ್ಮಾಣ ಮಾಡುವವರು ಅನಗತ್ಯವಾಗಿ ಒಂದೇ ದಿನದಂದು ಪರಸ್ಪರ ಸ್ಪರ್ಧೆ ಮಾಡುವುದರ ಬದಲು ಬೆಂಬಲವಾಗಿ ನಿಲ್ಲುವುದು ಆರೋಗ್ಯಕರ ಚಿತ್ರರಂಗಕ್ಕೆ ಒಳ್ಳೆಯದೆಂದು ಭಾವಿಸಿದ್ದೇವೆ’ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದು, ರಮೇಶ್ ಟಿ.ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.