ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘Love...ಲಿ’ಯಾದ ವಸಿಷ್ಠ ಸಿಂಹ

Last Updated 25 ಏಪ್ರಿಲ್ 2022, 9:47 IST
ಅಕ್ಷರ ಗಾತ್ರ

ತಮ್ಮ ಧ್ವನಿ ಹಾಗೂ ನಟನೆಯಿಂದ ವಿಲನ್‌ ಪಾತ್ರಗಳಿಗೆ ಗತ್ತು ತುಂಬಿದ್ದ ನಟ ವಸಿಷ್ಠ ಸಿಂಹ ಇದೀಗ ‘Love ಲಿ’ ಮೂಡ್‌ನಲ್ಲಿದ್ದಾರೆ. ಕಂಚಿನ ಕಂಠದ ವಸಿಷ್ಠ ಸಿಂಹ ನಟನೆಯ ಹೊಸ ಸಿನಿಮಾದ ಮುಹೂರ್ತ ಇತ್ತೀಚೆಗೆ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.

ನಾಯಕ ನಟನಾಗಿಯೂ, ಖಳನಾಯಕನಾಗಿಯೂ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ವಸಿಷ್ಠ ಸಿಂಹ ಸದ್ಯಕ್ಕೆ ತಾವು ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ‘ತಲ್ವಾರ್‌ಪೇಟೆ’ ಸಿನಿಮಾದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ‘ಡಾಲಿ’ ಧನಂಜಯ್‌ ನಟನೆಯ ‘ಹೆಡ್‌ಬುಷ್‌’ ಸೇರಿದಂತೆ ತೆಲುಗಿನ ಕಲೆ ಚಿತ್ರಗಳಲ್ಲೂ ವಸಿಷ್ಠ ಬಣ್ಣಹಚ್ಚಿದ್ದಾರೆ. ಇದೀಗ ವಸಿಷ್ಠ ಅವರ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ಸಿನಿಮಾಗೆ ‘Love...ಲಿ’ ಎಂಬ ಶೀರ್ಷಿಕೆ ಇಡಲಾಗಿದೆ. ಮುಹೂರ್ತದ ದಿನವೇ ಚಿತ್ರದ ಫಸ್ಟ್‌ಲುಕ್ ಕೂಡ ಬಿಡುಗಡೆಯಾಗಿದೆ.

‘Love...ಲಿ’ ಪ್ರೇಮಕಥೆಯಾಗಿದ್ದು, ಜೊತೆಗೆ ರೌಡಿಸಂನ ವಿಭಿನ್ನ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ. ವಸಿಷ್ಠ ಸಿಂಹ ಅವರ ಆಪ್ತ, ‘ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಮೇ 4ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ, ಶೀಘ್ರದಲ್ಲೇ ಉಳಿದ ಕಲಾವಿದರ ಮಾಹಿತಿಯನ್ನು ತಿಳಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT