ಗುರುವಾರ , ಮಾರ್ಚ್ 4, 2021
26 °C

ವೀರಂ ಫಸ್ಟ್ ಲುಕ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್‌ ದೇವರಾಜ್‌ ನಟಿಸುತ್ತಿರುವ ‘ವೀರಂ’ ಸಿನಿಮಾದ ಫಸ್ಟ್‌ ಲುಕ್‌ ಮತ್ತು ಟೈಟಲ್‌ ಲುಕ್‌ ಪೋಸ್ಟರ್‌ ಅನ್ನು ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದಂದು ಬುಧವಾರ ನಟ ದರ್ಶನ್‌ ಬಿಡುಗಡೆ ಮಾಡಿದ್ದಾರೆ.

ಖದರ್‌ ಕುಮಾರ್‌ ಈ ಚಿತ್ರ ನಿರ್ದೇಶಿಸುತ್ತಿದ್ದು, ದಿಶಾ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ಪಾರ್ವತಮ್ಮ ನಿರ್ಮಿಸುತ್ತಿದ್ದಾರೆ. ಪ್ರಜ್ವಲ್‌ಗೆ ಇದು 35ನೇ ಸಿನಿಮಾ. ಬಹುಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. 

ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ ಶುಭ ಹಾರೈಸಿರುವ ದರ್ಶನ್‌, ‘ಪ್ರಜ್ವಲ್‌ ಆದಷ್ಟು ಬೇಗ 50ನೇ ಸಿನಿಮಾಕ್ಕೆ ತಲುಪಲಿದ್ದಾರೆ’ ಎಂದು ಬೆನ್ನುತಟ್ಟಿದ್ದಾರೆ.

ನರಸಿಂಹ ನಿರ್ದೇಶನದ ‘ಇನ್ಸ್‌ಪೆಕ್ಟರ್ ವಿಕ್ರಂ’, ಲಕ್ಕಿ ಶಂಕರ್ ನಿರ್ದೇಶನದ ‘ಅರ್ಜುನ್ ಗೌಡ’ ಚಿತ್ರಗಳನ್ನು ಪೂರ್ಣಗೊಳಿಸಿರುವ  ಪ್ರಜ್ವಲ್ ಸದ್ಯ, ಜಡೇಶ್ ಕುಮಾರ್ ನಿರ್ದೇಶನ ಮತ್ತು ಗುರು ದೇಶಪಾಂಡೆ ನಿರ್ಮಾಣದ ‘ಜಂಟಲ್ ಮ್ಯಾನ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ.

 
 
 
 

 
 
 
 
 
 
 
 
 

Link in the bio ಫಸ್ಟ್ ಲುಕ್ ಲಂಚ್ ಮಾಡಿದ್ @darshanthoogudeepashrinivas ಅಣ್ಣನಿಗೆ ಥ್ಯಾಂಕ್ಸ್ ಹೇಳುತಾ ಸದಾ ಕಾಲ ನಮ್ಮೆಲರ ಮನಸಲ್ಲಿ ಇರುವಂತ ನಮ್ಮ ಸಾಹಸ ಸಿಂಹ ವಿಷ್ಣು ದಾದಾರವರ ಹುಟ್ಟುಹಬ್ಬದ ದಿನಚರಣೆಯ ದಿನ ಅವರನು ನೆನೆಸುತ ಅವರ ಅಭಿಮನಿಯಾಗಿ ವೀರಂ ಚಿತ್ರದ ಫಸ್ಟ್ ಲುಕ್ ನಿಮ್ಮ ಮುಂದೆ ತರುತಿದ್ದೇನೆ. ನಿಮ್ಮ ಪ್ರೀತಿ ಆಶೀರ್ವಾದ ನಿಮ್ಮ ಈ ಗೆಳೆಯನ ಮೇಲೆ ಸಧಾ ಕಾಲ ಈಗೆ ಇರಲಿ. ❤️

A post shared by Prajwal Devaraj (@prajwaldevaraj) on

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು