‘ವೀರಂ’ ಅಕ್ಕಿ ಬದಲು ವಿಕ್ಕಿ!

ಮಂಗಳವಾರ, ಜೂನ್ 25, 2019
30 °C
ವೀರಂ ಸಿನಿಮಾ ರಿಮೇಕ್ ಅ

‘ವೀರಂ’ ಅಕ್ಕಿ ಬದಲು ವಿಕ್ಕಿ!

Published:
Updated:
Prajavani

ತಮಿಳು ನಟ ಅಜಿತ್ ಅಭಿನಯದ ‘ವೀರಂ’ ಹಿಂದಿಗೆ ರಿಮೇಕ್ ಆಗುತ್ತಿರುವುದು ಗೊತ್ತಿರುವ ಸಂಗತಿಯೇ. ಈ ಹಿಂದೆ ಈ ಸಿನಿಮಾದಲ್ಲಿ ಅಜಿತ್ ಮಾಡಿದ ಪಾತ್ರಕ್ಕೆ ಅಕ್ಷಯ್ ಕುಮಾರ್‌ನನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಈಗ ಬಂದಿರುವ ಸುದ್ದಿಯ ಪ್ರಕಾರ ಆ ಪಾತ್ರಕ್ಕೆ ಅಕ್ಷಯ್ ಬದಲಿಗೆ ‘ರಾಜಿ’ ಹೀರೋ ವಿಕ್ಕಿ ಕೌಶಲ್ ಆಯ್ಕೆಯಾಗಿದ್ದಾರೆ.

‘ವೀರಂ’ ಸಿನಿಮಾ ಹಿಂದಿಯಲ್ಲಿ ‘ಲ್ಯಾಂಡ್ ಆಫ್ ಲುಂಗಿ’ (ಎಲ್‌ಒಎಲ್)ಶೀರ್ಷಿಕೆಯಲ್ಲಿ ಬರುತ್ತಿದ್ದು, ಫರ್ಹಾದ್ ಸಮ್ಜಿ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಲಿದ್ದಾರೆ.

ಅಕ್ಷಯ್ ಈಗಾಗಲೇ ದಕ್ಷಿಣದ ರಿಮೇಕ್ ಸಿನಿಮಾಗಳಾದ ‘ಸೂರ್ಯವಂಶಿ’, ‘ಲಕ್ಷ್ಮೀ ಬಾಂಬ್’ನಲ್ಲಿ ನಟಿಸುತ್ತಿದ್ದು ಬ್ಯುಸಿ ಶೆಡ್ಯೂಲ್‌ನಲ್ಲಿದ್ದಾರೆ. ಮೂರನೇ ಚಿತ್ರವೂ ರಿಮೇಕ್ ಆಗಿರುವುದರಿಂದ ಅಕ್ಷಯ್ ‘ವೀರಂ’ ರಿಮೇಕ್‌ನಲ್ಲಿ ನಟಿಸಲು ಒಲವು ತೋರಿಸಲಿಲ್ಲ ಎನ್ನಲಾಗಿದೆ. 

‘ಎಲ್‌ಒಎಲ್’ ಸಿನಿಮಾವನ್ನು ಸಾಜಿದ್ ನಾಡಿಯಾವಾಲಾ ನಿರ್ಮಿಸುತ್ತಿದ್ದು, ಇನ್ನೂ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿಲ್ಲ. ‘ವೀರಂ’ ಸಿನಿಮಾವನ್ನು ತಮಿಳಿನಲ್ಲಿ ಶಿವ ನಿರ್ದೇಶಿಸಿದ್ದರು. ಅಜಿತ್‌ಗೆ ನಾಯಕಿಯಾಗಿ ತಮನ್ನಾ ಭಾಟಿಯಾ ನಟಿಸಿದ್ದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !