ಭಾನುವಾರ, ಜೂನ್ 7, 2020
28 °C

ಶೀಘ್ರವೇ ವೀರಪುತ್ರ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಪ್ಲಿಮೆಂಟರಿ’ ವಿದ್ಯಾರ್ಥಿ ಜೀವನದಲ್ಲಿ ಪದೇ ಪದೇ ಕೇಳಿಬರುವ ಶಬ್ದ. ಇದೇ ಶೀರ್ಷಿಕೆಯಡಿ ನಿರ್ಮಾಪಕ ಗುರು ಬಂಡಿ‌ ಹಾಗೂ ನಿರ್ದೇಶಕ ಡಾ.ದೇವರಾಜ್ ಅವರ ಕಾಂಬಿನೇಷನ್‌ನಡಿ ನಿರ್ಮಾಣಗೊಂಡಿದ್ದ ‘ಸಪ್ಲಿಮೆಂಟರಿ’ ಚಿತ್ರ ಕಳೆದ ವರ್ಷ ತೆರೆಕಂಡಿತ್ತು. ವಿದ್ಯಾರ್ಥಿ ಜೀವನದ ಬಯಾಲಾಜಿಯನ್ನು ಪರದೆ ಮೇಲೆ ತೆರೆದಿಡಲಾಗಿತ್ತು. ಗುರು– ಶಿಷ್ಯ ಸಂಬಂಧ ಕುರಿತು ಸಿನಿಮಾ ನಿರ್ಮಿಸಿದ್ದ ಈ ಜೋಡಿ ಈಗ ಮತ್ತೊಂದು ಸಿನಿಮಾಕ್ಕೆ ಅಣಿಯಾಗಿದೆ.

ಈ ಹೊಸ ಸಿನಿಮಾಕ್ಕೆ ‘ವೀರಪುತ್ರ’ ಎಂಬ ಹೆಸರಿಡಲಾಗಿದೆ. ವಿನೂತನ ಕಥಾಹಂದರದ ಚಿತ್ರ ಇದು. ಈಗಾಗಲೇ, ಚಿತ್ರತಂಡ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡುವುದು ಚಿತ್ರತಂಡ ಮೂಲ ಉದ್ದೇಶ.

ಗುರು ಬಂಡಿ ಅವರು ತನ್ವಿ ಪ್ರೊಡಕ್ಷನ್ ಹೌಸ್ ಮೂಲಕ ‘ಧೀರ ಸಾಮ್ರಾಟ್’ ಎಂಬ ಚಿತ್ರ ನಿರ್ಮಿಸುತ್ತಿದ್ದು, ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ‘ವೀರಪುತ್ರ’ ಸಿನಿಮಾವನ್ನೂ ಇದೇ ಪ್ರೊಡಕ್ಷನ್ ಹೌಸ್ ಮೂಲಕವೇ ನಿರ್ಮಿಸಲಾಗುತ್ತಿದೆ.

ದೇವರಾಜ್‌ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ರಾಘವ್ ಸುಭಾಷ್ ಸಂಗೀತ ನೀಡಲಿದ್ದಾರೆ. ಸುಭಾಷ್ ಬೆಟಗೇರಿ ಅವರ ಸಾಹಿತ್ಯವಿದೆ. ಸಾಗರ್ ಗುಲ್ಬರ್ಗ ನೃತ್ಯ ಸಂಯೋಜಿಸಲಿದ್ದಾರೆ. ಚಿತ್ರದ ನಾಯಕ, ನಾಯಕಿ, ಪೋಷಕ ಕಲಾವಿದರ ಪಾತ್ರಗಳಿಗೆ ಆಯ್ಕೆ ನಡೆಯುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.