ಗುರುವಾರ , ಆಗಸ್ಟ್ 11, 2022
21 °C

ಪತಿಯ ಆರೋಗ್ಯಕ್ಕಾಗಿ ಪ್ರಾರ್ಥಿಸಿ: ನಟ ದಿಲೀಪ್‌ ಕುಮಾರ್ ಪತ್ನಿ ಸಾಯಿರಾ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ಖ್ಯಾತ ನಟ ದಿಲೀಪ್‌ ಕುಮಾರ್ ಹೆಸರು ಕೇಳದವರಿಲ್ಲ. ಭಾರತೀಯ ಸಿನಿರಂಗದಲ್ಲೇ ಅತ್ಯುತ್ತಮ ನಟ ಎಂಬ ಖ್ಯಾತಿಗೆ ಭಾಜನರಾಗಿರುವ ದಿಲೀಪ್ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ವಿಭಿನ್ನ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ದಿಲೀಪ್ ಇನ್ನೇನು ಕೆಲ ದಿನಗಳಲ್ಲಿ 98ನೇ ವಯಸ್ಸಿಗೆ ಕಾಲಿರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದಿಲೀಪ್‌ ಪತ್ನಿ ಸಾಯಿರಾ ಬಾನು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ನನ್ನ ಗಂಡನ ಆರೋಗ್ಯ ಸ್ವಲ್ಪ ಹದಗೆಟ್ಟಿದೆ, ಅವರು ಅಷ್ಟೇನು ಆರೋಗ್ಯವಾಗಿಲ್ಲ. ಅವರಿಗಾಗಿ ಪ್ರಾರ್ಥಿಸಿ’ ಎಂದಿದ್ದರು.

76 ವರ್ಷದ ಸಾಯಿರಾ ‘ಗಂಡನ ಆರೋಗ್ಯಕ್ಕಾಗಿ ಪ್ರಾರ್ಥಿಸಿ’ ಎಂದಿದ್ದನ್ನು ಕೇಳಿದ ದಿಲೀಪ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಅಭಿಮಾನಿಗಳ ಆತಂಕಕ್ಕೆ ಸ್ಪಂದಿಸಿದ ಸಾಯಿರಾ ಸೋಮವಾರ ಮತ್ತೆ ಹೇಳಿಕೆ ನೀಡಿದ್ದು ‘ದಿಲೀಪ್ ಸ್ವಲ್ಪ ನಿಶಕ್ತರಾಗಿದ್ದಾರೆ. ಉಳಿದಂತೆ ಆರಾಮಾಗಿದ್ದಾರೆ’ ಎಂದಿದ್ದಾರೆ.

‍ಈ ವರ್ಷ ದಿಲೀಪ್ ಸಹೋದರರಾದ ಅಸ್ಲಂ ಖಾನ್‌ ಹಾಗೂ ಈಶಾನ್ ಖಾನ್ ಕೋವಿಡ್‌ನಿಂದಾಗಿ ಮೃತಪಟ್ಟಿದ್ದರು. ಆ ಕಾರಣಕ್ಕೆ ಈ ವರ್ಷ ದಿಲೀಪ್ ಹಾಗೂ ಸಾಯಿರಾ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು