ಮಂಗಳವಾರ, ಜೂನ್ 28, 2022
27 °C

ಬಾಲಿವುಡ್‌ ನಟ ದಿಲೀಪ್‌ ಕುಮಾರ್‌ಗೆ ಉಸಿರಾಟದ ತೊಂದರೆ: ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ಹೆಸರಾಂತ ನಟ ದಿಲೀಪ್ ಕುಮಾರ್ ಅವರಿಗೆ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಇಲ್ಲಿನ ಪಿ.ಡಿ.ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ.

98 ವರ್ಷದ ಅವರ ಚಿಕಿತ್ಸೆಯ ಉಸ್ತುವಾರಿಯನ್ನು ಹಿರಿಯ ವೈದ್ಯ ಡಾ.ಜಲೀಲ್‌ ಪಾರ್ಕರ್‌, ಹೃದ್ರೋಗ ತಜ್ಞ ಡಾ.ನಿತಿನ್‌ ಗೋಖಲೆ ನೇತೃತ್ವದ ಪರಿಣತರ ತಂಡ ಗಮನಿಸುತ್ತಿದೆ.

ಅವರ ಪತ್ನಿ ಸಾಯಿರಾ ಬಾನು ಅವರು, ನಟನ ಟ್ವೀಟರ್ ಖಾತೆಯನ್ನು ನಿಭಾಯಿಸುತ್ತಿದ್ದು, ಆರೋಗ್ಯ ಸ್ಥಿತಿ ಕುರಿತಂತೆ ಮಾಹಿತಿ ನೀಡುತ್ತಿದ್ದಾರೆ.

‘ದಿಲೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ಸಮಸ್ಯೆ ಇದೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ’ ಎಂದು ಕೋರಿದ್ದಾರೆ.

ಕಳೆದ ವರ್ಷ ದಿಲೀಪ್‌ ಕುಮಾರ್ ಅವರ ತಮ್ಮಂದಿರಾದ ಇಶಾನ್‌ ಖಾನ್‌ (90) ಮತ್ತು ಅಸ್ಲಂ ಖಾನ್‌ (88) ಅವರು ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದರು.

ಈ ಮಧ್ಯೆ, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಅವರು ಹಿಂದೂಜಾ ಆಸ್ಪತ್ರೆಗೆ ಭೇಟಿ ನೀಡಿ, ದಿಲೀಪ್‌ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು