ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಚಿತ್ರೀಕರಣದ ವೇಳೆ ನಟ ಪ್ರಕಾಶ್‌ ರಾಜ್‌ಗೆ ಕೈ ಮೂಳೆ ಮುರಿತ: ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚೆನ್ನೈನಲ್ಲಿ ನಟ ಧನುಷ್ ಅಭಿನಯದ #D44 ಚಿತ್ರೀಕರಣದ ವೇಳೆ ಬಹುಭಾಷಾ ನಟ ಪ್ರಕಾಶ್ ರಾಜ್‌ ಅವರು ಕುಸಿದು ಬಿದ್ದು ಗಾಯಗೊಂಡಿದ್ದಾರೆ.

ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಕೈಯಲ್ಲಿ ಮೂಳೆ ಮುರಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಪ್ರಕಾಶ್‌ ರಾಜ್‌, ಶಸ್ತ್ರಚಿಕಿತ್ಸೆಗಾಗಿ ಮೂಳೆ ತಜ್ಞ ಡಾ.ಗುರುವಾ ರೆಡ್ಡಿ ಅವರ ಬಳಿ ಚಿಕಿತ್ಸೆ ಪಡೆಯಲು ಹೈದರಾಬಾದ್‌ಗೆ ತೆರಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಕೆಳಗೆ ಬಿದ್ದು ಕೈಗೆ ಚಿಕ್ಕದಾಗಿ ಪೆಟ್ಟಾಗಿದೆ. ಹೈದರಾಬಾದ್‌ನ ನನ್ನ ಸ್ನೇಹಿತ ಡಾ. ಗುರುವಾ ರೆಡ್ಡಿ ಬಳಿ ಚಿಕಿತ್ಸೆ ಪಡೆಯಲು ತೆರಳುತ್ತಿದ್ದೇನೆ. ಶೀಘ್ರವೇ ಗುಣಮುಖನಾಗುತ್ತೇನೆ. ನಿಮ್ಮ ಹಾರೈಕೆ ನನಗೆ ಇರಲಿ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು