ಭಾನುವಾರ, ಜುಲೈ 25, 2021
25 °C

ಬಾಲಿವುಡ್‌ ಖ್ಯಾತ ನಿರ್ದೇಶಕ ಬಸು ಚಟರ್ಜಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ಬಸು ಚಟರ್ಜಿ (93) ಅವರು ವಯೋಸಹಜ ಅನಾರೋಗ್ಯದಿಂದಾಗಿ ಗುರುವಾರ ಇಲ್ಲಿ ತಮ್ಮ ನಿವಾಸದಲ್ಲಿ ನಿಧನರಾದರು. 

ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಬಸು ಅವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಇಲ್ಲಿ ನಡೆಯಿತು. 

ಭಾರತದ ಮಧ್ಯಮ ವರ್ಗದವರ ಜೀವನವನ್ನು ಪರದೆ ಮೇಲೆ ತಂದವರು ಬಸು ಚಟರ್ಜಿ. ಅವರ ‘ರಜನಿಗಂಧ’ ಸಿನಿಮಾ ಇದಕ್ಕೊಂದು ಉತ್ತಮ ಉದಾಹರಣೆ.‘ಉಸ್‌ ಪಾರ್‌’, ‘ಛೋಟಿ ಸಿ ಬಾತ್‌’, ‘ಪಿಯಾ ಕಾ ಘರ್‌’, ‘ಖಟ್ಟಾ ಮೀಠಾ’ ಮುಂತಾದವು ಅವರ ಇತರ ಪ್ರಸಿದ್ಧ ಸಿನಿಮಾಗಳು. ದೂರದರ್ಶನಕ್ಕಾಗಿ ‘ಭ್ಯೋಮ್‌ಕೇಶ್‌ ಭಕ್ಷಿ’ ಮತ್ತು ‘ರಜನಿ’ ಧಾರಾವಾಹಿಗಳನ್ನು ನಿರ್ದೇಶಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು