ಶುಕ್ರವಾರ, ಫೆಬ್ರವರಿ 28, 2020
19 °C

ಭೂತ್ ಟ್ರೇಲರ್‌: ನಟ ವಿಕ್ಕಿ ಕೌಶಲ್‌ಗೆ ದೆವ್ವಗಳ ಕಾಟ! ಫೆ. 21ಕ್ಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ವಿಕ್ಕಿ ಕೌಶಲ್‌ ಅಭಿನಯದ ‘ಭೂತ್‌ ಪಾರ್ಟ್‌ ಒನ್‌: ದಿ ಹಂಟೆಡ್‌ ಶಿಪ್‌’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 

ಚಿತ್ರತಂಡ ಈ ಹಿಂದೆ ಘೋಷಣೆ ಮಾಡಿದಂತೆ ಫೆಬ್ರುವರಿ 21ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ನಿನ್ನೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಯುಟ್ಯೂಬ್‌ನಲ್ಲಿ ಬಿಡುಗಡೆಯಾದ 24 ಗಂಟೆಗಳಲ್ಲಿ 1.5 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. 

ವಿಕ್ಕಿ ಕೌಶಲ್‌ ಅವರ ಮೊದಲ ಹಾರರ್‌ ಸಿನಿಮಾ ಇದಾಗಿದೆ. ಮುಂಬೈನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾ ತೆಗೆಯಲಾಗಿದೆ. ಒಂದು ವಸತಿ ಕಾಲೋನಿ ಮತ್ತು ಹಡಗಿನಲ್ಲಿ ಸಿನಿಮಾದ ಸಂಪೂರ್ಣ ಶೂಟಿಂಗ್‌ ನಡೆದಿದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಶೂಟಿಂಗ್ ಮಾಡಿರುವುದು ವಿಶೇಷ. ಕೊಲೆ ಪ್ರಕರಣದ ತನಿಖೆ ಮಾಡುತ್ತಿರುವ ವಿಕ್ಕಿ ಕೌಶಲ್‌ಗೆ ದೆವ್ವಗಳು ಎದುರಾಗುತ್ತವೆ, ಮುಂದಿನ ಕುತೂಹಲವನ್ನು ತೆರೆಯ ಮೇಲೆ ನೋಡಿ ಎಂಜಾಯ್‌ ಮಾಡಬೇಕು ಎಂದು ಚಿತ್ರ ತಂಡ ಹೇಳಿದೆ. 

ಈ ಸಿನಿಮಾವನ್ನು ಕರಣ್‌ ಜೋಹರ್ ನಿರ್ಮಾಣ ಮಾಡಿದ್ದು ಭಾನು ಪ್ರತಾಪ್‌ ಸಿಂಗ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಭೂಮಿ ಪಡ್ನೇಕರ್ ಸೇರಿದಂತೆ ಅಶುತೋಷ್‌ ರಾಣಾ, ಸಿದ್ಧಾರ್ಥ ಕಪೂರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು