ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಳಪತಿ’ ವಿಜಯ್‌ ಜೊತೆ ವಿಡಿಯೊ ಜಾಕಿ ರಮ್ಯಾ

Last Updated 11 ನವೆಂಬರ್ 2019, 19:40 IST
ಅಕ್ಷರ ಗಾತ್ರ

ತಮಿಳು ನಟ ವಿಜಯ್‌ ನಟಿಸುತ್ತಿರುವ ‘ದಳಪತಿ 64’ ಸಿನಿಮಾದಲ್ಲಿ ಒಂದೊಂದೇ ಹೊಸ ಮುಖಗಳು ಸೇರಿಕೊಳ್ಳುತ್ತಿವೆ. ಈಗ ಜನಪ್ರಿಯ ವಿಡಿಯೊ ಜಾಕಿ ಎಂದು ಗುರುತಿಸಿಕೊಂಡಿರುವ ರಮ್ಯಾ ಸುಬ್ರಹ್ಮಣಿಯನ್‌ ಅವರು ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ರಮ್ಯಾ ಈಗಾಗಲೇ ಚಿತ್ರಕ್ಕೆ ಸಹಿ ಮಾಡಿದ್ದಾರೆ. ‘ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ನನ್ನದು ಪ್ರಮುಖ ಪಾತ್ರ. ದೆಹಲಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. 20 ದಿನಗಳಿಂದ ನಾನು ಇದರಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಮ್ಯಾ, ನಟ ವಿಜಯ್‌ ಅವರ ದೊಡ್ಡ ಅಭಿಮಾನಿಯಂತೆ. ವಿಡಿಯೊ ಜಾಕಿಯಾಗಿರುವ ಅವರು ಕಿರುತೆರೆಯಲ್ಲೂ ನಟಿಸಿದ್ದಾರೆ.ದೆಹಲಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಚಿತ್ರದ ನಾಯಕಿ ಮಾಳವಿಕಾ ಮೋಹನನ್‌ ಅವರು ಪಾಲ್ಗೊಂಡಿದ್ದಾರೆ.

ಈ ಚಿತ್ರದಲ್ಲಿ ವಿಜಯ್‌ ಸೇತುಪತಿ ಅವರು ಖಳನಾಯಕನಾಗಿ ನಟಿಸುತ್ತಿದ್ದಾರೆ. ಕ್ಸೇವಿಯರ್‌ ಬ್ರಿಟ್ಟೊ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT