ಗುರುವಾರ , ಆಗಸ್ಟ್ 22, 2019
23 °C

ಶ್ರೇಷ್ಠ ಗಣಿತಜ್ಞೆ ಶಕುಂತಳಾ ದೇವಿ ಬಯೋಪಿಕ್‌ನಲ್ಲಿ ವಿದ್ಯಾ

Published:
Updated:
Prajavani

ನಟಿ ವಿದ್ಯಾಬಾಲನ್‌ ಶ್ರೇಷ್ಠ ಗಣಿತಜ್ಞೆ, ಮಾನವ ಕಂಪ್ಯೂಟರ್‌ ಎಂದೇ ಖ್ಯಾತರಾದ ಶಕುಂತಳಾ ದೇವಿ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ. 

ಎಲ್ಲಾ ಸರಿಹೋಗಿದ್ದರೆ, ಈ ಸಿನಿಮಾಕ್ಕಿಂತ ಮೊದಲು ವಿದ್ಯಾಬಾಲನ್‌,  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಬೇಕಾಗಿತ್ತು.

ಪತ್ರಕರ್ತೆ– ಲೇಖಕಿ ಸಾಗರಿಕಾ ಘೋಷ್‌ ಅವರು ತಾವು ಬರೆದ ‘ಇಂದಿರಾ: ಇಂಡಿಯಾಸ್‌ ಮೋಸ್ಟ್‌ ಪವರ್‌ಫುಲ್‌ ಪ್ರೈಮ್‌ ಮಿನಿಸ್ಟರ್‌’ ಕೃತಿಯನ್ನು ಸಿನಿಮಾ ಮಾಡುತ್ತಿರುವುದಾಗಿ ಕಳೆದ ವರ್ಷವೇ ಘೋಷಿಸಿದ್ದರು.

ಈ ಸಿನಿಮಾವನ್ನು ವಿದ್ಯಾ ಬಾಲನ್‌ ಹಾಗೂ ರಾಯ್‌ ಕಪೂರ್‌ ಫಿಲ್ಮ್ಸ್‌ನಿರ್ಮಾಣ ಮಾಡುತ್ತಿದೆ. ಆದರೆ ಅದಾದ ಬಳಿಕ ಈ ಸಿನಿಮಾ ಬಗ್ಗೆ ಇಲ್ಲಿಯವರೆಗೂ ಯಾವುದೇ 
ಸುದ್ದಿ ಇಲ್ಲ. 

‘ಮಿಷನ್‌ ಮಂಗಲ’ ಪ್ರಚಾರ ಸಂದರ್ಭದಲ್ಲಿ ವಿದ್ಯಾಬಾಲನ್‌ ಅವರಿಗೆ ಈ ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿದೆ.

ಅದಕ್ಕೆ ‘ಸಿನಿಮಾ ಕೆಲಸಗಳು ಯಾವಾಗ ಬೇಕಾದರೂ ಆರಂಭ ಆಗಬಹುದು. ಆ ಸಿನಿಮಾಕ್ಕೆ ಸಂಬಂಧಪಟ್ಟ ಕೆಲಸಗಳು ನಡೆದಿವೆ. ಸಿನಿಮಾ ಸಂಬಂಧಿಸಿದ ವಿಚಾರ, ಇಂದಿರಾ ಅವರ ಜೀವನದಲ್ಲಿ ನಡೆದ ಪ್ರಮುಖ ಸಂಗತಿಗಳು, ಪ್ರೇಕ್ಷಕರಿಗೆ 
ಏನು ಹೇಳಬೇಕು ಎಂಬ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಸಿನಿಮಾ ಚಿತ್ರಕತೆ ಹಂತದಲ್ಲಿದೆ’ ಎಂದು ಉತ್ತರಿಸಿದ್ದಾರೆ. 

ಈ ಸಿನಿಮಾದಲ್ಲಿ ಇಂದಿರಾ ಗಾಂಧಿಯಾಗಿ ವಿದ್ಯಾ ಬಾಲನ್‌ ಅವರೇ ನಟಿಸಲಿದ್ದಾರೆ. ಇಂದಿರಾಗಾಂಧಿ ಅವರ ಜೀವನದ ಕೆಲವು ಪ್ರಮುಖ ಘಟ್ಟಗಳನ್ನು ಚಿತ್ರೀಕರಿಸಲಾಗುತ್ತದೆ ಎನ್ನಲಾಗಿದೆ.

Post Comments (+)