ಭಾನುವಾರ, ಡಿಸೆಂಬರ್ 8, 2019
20 °C
NTR Biopic- vidya balan

ಎನ್‌ಟಿಆರ್ ಪತ್ನಿ ಪಾತ್ರದಲ್ಲಿ ವಿದ್ಯಾ ಬಾಲನ್

Published:
Updated:
Deccan Herald

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ನಟ ಎನ್.ಟಿ. ರಾಮರಾವ್ ಅವರ ಜೀವನಚರಿತ್ರೆ ಆಧರಿಸಿ ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾಬಾಲನ್ ಎನ್‌ಟಿಆರ್ ಪತ್ನಿ ಪಾತ್ರ ಮಾಡುತ್ತಿದ್ದಾರೆ.

ಮಲಯಾಳಂನ ಒಂದೆರಡು ಸಿನಿಮಾಗಳ ಕೆಲ ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ವಿದ್ಯಾ, ಇದುವರೆಗೆ ಹಿಂದಿ ಸಿನಿಮಾಗಳಲ್ಲೇ ಹೆಚ್ಚು ಪಾತ್ರ ಮಾಡಿದ್ದಾರೆ.

‘ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ಅದರಲ್ಲೂ ಎನ್‌ಟಿಆರ್ ಅವರ ಪತ್ನಿ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಥ್ರಿಲ್ ಅನಿಸುತ್ತಿದೆ. ಮೊದಲ ಬಾರಿಗೆ ಹಿಂದಿ ಹೊರತು ಪಡಿಸಿ ಇತರ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿರುವುದು ಅದ್ಭುತ ಅನುಭವ. ತೆಲುಗು ಮತ್ತು ಹಿಂದಿ ಎರಡು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ಬಗ್ಗೆ ಅಪಾರ ಕುತೂಹಲವಿದೆ’ ಎಂದು ವಿದ್ಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಎನ್‌ಟಿಆರ್ ಅವರ ಮೊದಲ ಪತ್ನಿ ಬಸವತಾರಕಂ ಅವರ ಪಾತ್ರದಲ್ಲಿ ನಾನು ಅಭಿನಯಿಸಿದ್ದು, ಒಟ್ಟು ಐದು ದಿನಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ನಿತ್ಯವೂ ಬೆಳಿಗ್ಗೆ 9ಕ್ಕೆ ಆರಂಭವಾಗುತ್ತಿದ್ದ ಶೂಟಿಂಗ್ ಸಂಜೆ 6ಕ್ಕೆ ಪ್ಯಾಕಪ್ ಆಗುತ್ತಿತ್ತು. ಪಕ್ಕಾ ವೃತ್ತಿಪರ ತಂಡದ ಜತೆಗೆ ಕೆಲಸ ಮಾಡಿದ ಅನುಭವ  ಮರೆಯಲಾಗದ್ದು’ ಎಂದು ಅವರು ಚಿತ್ರೀಕರಣದ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಎನ್‌ಟಿಆರ್ ಪಾತ್ರದಲ್ಲಿ ನಂದಮೂರಿ ಬಾಲಕೃಷ್ಣ ಕಾಣಿಸಿಕೊಳ್ಳುತ್ತಿದ್ದು, ಚಿತ್ರವನ್ನು ಕೃಷ್ಣ ನಿರ್ದೇಶಿಸಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನವಿದೆ. ಆಂಧ್ರಪ್ರದೇಶದ ಸಿನಿಮಾ ಮತ್ತು ರಾಜಕಾರಣದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಎನ್‌ಟಿಆರ್ ಅವರ ಜೀವನಾಧಾರಿತ ಚಿತ್ರ ಈಗಾಗಲೇ ಸಿನಿಪ್ರೇಮಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು