ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌– ಅಟ್ಲೀ ಹೊಸ ಸಿನಿಮಾ?

Last Updated 21 ನವೆಂಬರ್ 2019, 19:30 IST
ಅಕ್ಷರ ಗಾತ್ರ

‘ಬಿಗಿಲ್‌’ ನಿರ್ದೇಶಕ ಅಟ್ಲೀ ಕುಮಾರ್‌, ಬಾಲಿವುಡ್‌ನ ಬಾದ್‌ಷಾ ಶಾರುಕ್‌ ಖಾನ್‌ ಜೊತೆ ಮೂರು ಸಿನಿಮಾಗಳ ಮಾತುಕತೆ ನಡೆಸಿದ್ದಾರೆ. ತಮಿಳಿನ ಈ ಜನಪ್ರಿಯ ನಿರ್ದೇಶಕ ಕಾಲಿವುಡ್‌ಗೆ ಗುಡ್‌ಬೈ ಹೇಳುತ್ತಾರೆ ಎಂದು ಈಚೆಗೆ ಗಾಳಿಸುದ್ದಿಗಳು ಹರಿದಾಡಿದ್ದವು.

ಅಟ್ಲೀ ಕುಮಾರ್‌ ಬಗ್ಗೆ ಏನೇ ಗಾಸಿಪ್‌ ಸುದ್ದಿ ಹರಿದಾಡಲಿ, ‘ಬಿಗಿಲ್‌’ ಚಿತ್ರದ ಬಳಿಕ ಈಗ ಮತ್ತೊಂದು ಹೊಸ ತಮಿಳು ಸಿನಿಮಾದಲ್ಲಿ ಅಟ್ಲಿ ಹಾಗೂ ವಿಜಯ್‌ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಅಟ್ಲೀ ನಿರ್ದೇಶನದ ‘ಥೇರಿ’, ‘ಮರ್ಸೆಲ್‌’ ಹಾಗೂ ‘ಬಿಗಿಲ್‌’ ಚಿತ್ರಗಳಲ್ಲಿ ವಿಜಯ್‌ ನಾಯಕನಾಗಿ ನಟಿಸಿದ್ದರು. ಈ ಹೊಸ ಚಿತ್ರ ಸೆಟ್ಟೇರಿದರೆ ಇವರಿಬ್ಬರು ಜೊತೆಯಾಗಿ ಮಾಡುತ್ತಿರುವ ನಾಲ್ಕನೇ ತಮಿಳು ಚಿತ್ರ ಇದಾಗಿದೆ. ಈ ಮೂರು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದವು. ಹಾಗಾಗಿ ಈ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಹೊಸ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಟ ವಿಜಯ್‌ ನಾಯಕನಾಗಿ ನಟಿಸಿರುವ ಎಲ್ಲಾ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಹಿಟ್‌ ಗಳಿಸುತ್ತಿವೆ. ‘ಥೇರಿ’, ‘ಮರ್ಸೆಲ್‌’, ‘ಸರ್ಕಾರ್‌’ ಹಾಗೂ ‘ಬಿಗಿಲ್‌’ ಒಂದರ ಹಿಂದೆ ಒಂದರಂತೆ ಬಿಡುಡೆಗೊಂಡಿವೆ. ಸದ್ಯ ದೆಹಲಿಯಲ್ಲಿ ‘ದಳಪತಿ 64’ ಚಿತ್ರದ ಶೂಟಿಂಗ್‌ನಲ್ಲಿ ವಿಜಯ್‌ ಬ್ಯುಸಿಯಾಗಿದ್ದಾರೆ.

‘ದಳಪತಿ 64’ ಚಿತ್ರಕ್ಕೂ ಮುನ್ನವೇ ಅವರ 65ನೇ ಚಿತ್ರದ ಬಗ್ಗೆ ಅಂತೆಕಂತೆ ಸುದ್ದಿಗಳು ಹರಿದಾಡುತ್ತಿವೆ. 65ನೇ ಸಿನಿಮಾವನ್ನು ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಇದೂ ಕೂಡ ಆ್ಯಕ್ಷನ್‌ ಚಿತ್ರ ಎಂಬ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಅಟ್ಲಿ ಹಾಗೂ ವಿಜಯ್‌ ಜೊತಗಿರುವ ಫೋಟೊಗಳು ಹರಿದಾಡುತ್ತಿವೆ. ಆದರೆ ಈ ಹೊಸ ಚಿತ್ರದ ಬಗ್ಗೆ ಯಾರೊಬ್ಬರೂ ಅಧಿಕೃತವಾಗಿ ಮಾತನಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT