‘ಹೀರೊ’ಗೆ ವಿಜಯ್‌ ಹೀರೊ

7

‘ಹೀರೊ’ಗೆ ವಿಜಯ್‌ ಹೀರೊ

Published:
Updated:
Prajavani

ತೆಲುಗಿನ ‘ಅರ್ಜುನ್‌ ರೆಡ್ಡಿ’ ವಿಜಯ್‌ ದೇವರಕೊಂಡ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆನಂದ್ ಅನ್ನಾಮಲೈ ನಿರ್ದೇಶನದ ಈ ಚಿತ್ರದ ಶೀರ್ಷಿಕೆಯೂ ‘ಹೀರೊ’. ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆಯೊಂದಿಗೆ ವಿಜಯ್‌ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ.

ಭರತ್‌ ಕಮ್ಮಾ ನಿರ್ದೇಶನದ ‘ಡಿಯರ್‌ ಕಾಮ್ರೇಡ್‌’ ಮತ್ತು ಕ್ರಾಂತಿ ಮಾಧವ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿರುವ ವಿಜಯ್‌ ಟಾಲಿವುಡ್‌ನ ಬಹುಬೇಡಿಕೆಯ ನಟರಲ್ಲೊಬ್ಬರು.

‘ಹೀರೊ’ದಲ್ಲಿ ವಿಜಯ್‌ ಹಲವು ರೀತಿಯ ಬೈಕ್‌ ಸ್ಟಂಟ್‌ಗಳನ್ನು ಮಾಡಬೇಕಾಗಿದೆ. ತರಬೇತಿಯನ್ನೂ ಪಡೆಯುತ್ತಿದ್ದಾರೆ. ಚಿತ್ರಕ್ಕೆ ಸಂಭಾಷಣೆಯನ್ನೂ ಆನಂದ್‌ ಅನ್ನಾಮಲೈ ಅವರೇ ಬರೆದಿದ್ದಾರೆ ಎನ್ನಲಾಗಿದೆ. 

ಕ್ರಾಂತಿ ಮಾಧವ–ವಿಜಯ್‌ ಸಂಯೋಜನೆಯ ಹೊಸ ಚಿತ್ರ ಚಿತ್ರೀಕರಣದ ಹಂತದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸುತ್ತಿದೆ. ಚಿತ್ರಕ್ಕೆ  ಇದುವರೆಗೂ ಮೂವರು ನಾಯಕಿಯರಿದ್ದರು. ರಾಶಿ ಖನ್ನಾ, ಐಶ್ವರ್ಯ ರಾಜೇಶ್‌ ಮತ್ತು ಇಸಾಬೆಲ್ ಡೇ ಜೊತೆಗೆ ಇದೀಗ ಕ್ಯಾಥರಿನ್‌ ಟ್ರೇಸಾ ಸೇರ್ಪಡೆಯಾಗಿದ್ದಾರೆ. ಡಿಯರ್‌ ಕಾಮ್ರೇಡ್‌ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. 

ಇದೇ ವೇಳೆ ವಿಜಯ್‌ ತಮ್ಮದೇ ಪ್ರೊಡಕ್ಷನ್‌ ಹೌಸ್‌ ಮೂಲಕ ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ತರುಣ್‌ ಭಾಸ್ಕರ್‌ ಧಾಸ್ಯಂ ನಿರ್ದೇಶನದ ಈ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ತೆರೆ ಕಾಣಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !