ಬುಧವಾರ, ಮಾರ್ಚ್ 22, 2023
22 °C

ನಿರ್ಮಾಪಕ ಹರೀಶ್ ಶಂಕರ್ ಅವರೊಂದಿಗೆ ನಟ ವಿಜಯ್ ದೇವರಕೊಂಡ ಮುಂದಿನ ಸಿನಿಮಾ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನಟ ವಿಜಯ್ ದೇವರಕೊಂಡ ಅವರು ಶೀಘ್ರದಲ್ಲೇ ಖ್ಯಾತ ಚಲನಚಿತ್ರ ನಿರ್ಮಾಪಕ ಹರೀಶ್ ಶಂಕರ್ ಅವರೊಂದಿಗೆ ಆಕ್ಷನ್-ಎಂಟರ್ಟೈನರ್ ಸಿನಿಮಾಗಾಗಿ ಕೈಜೋಡಿಸಬಹುದು ಎಂದು ವರದಿಗಳು ತಿಳಿಸಿವೆ. ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ಅನ್ನು ಈಗಾಗಲೇ ವಿವರಿಸಿದ್ದು, ಯುವ ನಾಯಕ ಗ್ರೀನ್ ಸಿಗ್ನಲ್ ನೀಡಿದರೆ ಚಿತ್ರದ ಮುಂದಿನ ಕೆಲಸ ಪ್ರಾರಂಭಿಸಲಿದ್ದಾರೆ. ಇತ್ತೀಚೆಗೆ ತೆಲುಗು ಬ್ಲಾಕ್‌ಬಸ್ಟರ್ 'ವಕೀಲ್ ಸಾಬ್' ಚಿತ್ರದೊಂದಿಗೆ ಗಮನ ಸೆಳೆದ ದಿಲ್ ರಾಜು ಚಿತ್ರವನ್ನು ನಿರ್ಮಿಸಲಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ಮಧ್ಯೆ, ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ 'ಲಿಗರ್' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರವನ್ನು ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ದೇವರಕೊಂಡ ಅವರ ಜೊತೆ ಇದೇ ಮೊದಲ ಬಾರಿಗೆ ನಾಯಕಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ.

ದೇವರಕೊಂಡ ಅವರು ನಿರ್ದೇಶಕ ಸುಕುಮಾರ್ ಅವರೊಂದಿಗೆ ಚಿತ್ರವೊಂದರಲ್ಲಿ ಜೊತೆಯಾಗಬೇಕಿತ್ತು. ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಏಕೆಂದರೆ ಅಲ್ಲು ಅರ್ಜುನ್ ಮತ್ತು 'ಕರ್ನಾಟಕದ ಕ್ರಷ್' ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಚಿತ್ರದಲ್ಲಿ ಸುಕುಮಾರ್ ಬ್ಯುಸಿಯಾಗಿದ್ದಾರೆ.

ಅರ್ಜುನ್ ರೆಡ್ಡಿ ಮತ್ತು ಗೀತಾ ಗೋವಿಂದಂ ಸಿನಿಮಾದ ಮೂಲಕ ಹೆಸರಾದ ವಿಜಯ್ ದೇವರಕೊಂಡ ಅವರಿಗೆ ಡಿಯರ್ ಕಾಮ್ರೇಡ್ ಚಿತ್ರ ಕಹಿಯನ್ನು ನೀಡಿತು. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾದ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಜೊತೆಗೆ ಮಿಶ್ರ ಪ್ರತಿಕ್ರಿಯೆನ್ನ ಪಡೆದುಕೊಂಡಿತು. ವರ್ಲ್ಡ್ ಫೇಮಸ್ ಲವರ್ ಚಿತ್ರದೊಂದಿಗೆ ಯಶಸ್ಸನ್ನ ಕಾಣಲು ಮುಂದಾಗಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಇದೀಗ ಅವರ ಮುಂಬರುವ ಚಿತ್ರಗಳು ಹಿಟ್ ಆಗಲಿವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು